ನೆನಪಿನ ನವಿಲುಗರಿ..! ಯುವರ್ ಸ್ವೀಟ್ ಹಾರ್ಟ್ ಗೆಳತಿ... ಸಿಂಪಲ್ ಹುಡ್ಗಿ ನೇತ್ರಾ..

☻ನನ್ ಬಗ್ಗೆ ನಾನೇ ಹೇಳಬೇಕಾ... ಸರಿ ಹೇಳ್ತೀನಿ ಕೇಳಿ...☻

☻ಭಾವನಾ ಜೀವಿ.., ಅಭಿವ್ಯಕ್ತಿಯನ್ನು ಹೆಚ್ಚು ಇಷ್ಟ ಪಡುವ, ಪ್ರೀತಿಸುವ ಮತ್ತು ನಂಬುವ ಒಬ್ಳು ಸಾಮಾನ್ಯ ಹುಡುಗಿ ನಾನು... ಕಾರಣವಿಲ್ಲದೆನೇ ಖುಷಿಯಿಂದ ಇರಬಲ್ಲೆ..!☻

☻ನಾನು ಕನ್ನಡತಿ ಎಂಬ ಹೆಮ್ಮೆ ನನ್ಗೆ ಇದೇ, ಕನ್ನಡ ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ...☻

☻ಪುಟ್ಟ ಆಸೆಗಳನ್ನು ಹೊತ್ತಿರುವ ಪುಟ್ಟ ಹೃದಯ ನನ್ನದು...☻

☻ಕನಸುಗಳಿಗೆ ಭಾವನೆಗಳಿಗೆ ನನ್ನಲಿ ತುಂಬಾ ಜಾಗವಿದೆ... ಹೀಗೆ ಇರಬೇಕು ಅನ್ನೊ ಆಸೆಗಳಿದೆ.., ಇಲ್ಲದ್ದಿದರು ಅನುಸರಿಸಿ ಕೊಂಡು ಹೊಗುವ ತಾಳ್ಮೆನೂ ಇದೆ..!☻

☻ನನಗೆ ಹತ್ತಿರ ವಾದವರು ನನ್ನ ಜೊತೆಲೇ ಇರಬೇಕು ಅನ್ನೊ ಸ್ವಾರ್ಥಿ ನಾನು...☻

☻ಕೇವಲ ಕಲ್ಪನೆಯಲ್ಲೆ ಬದುಕುವ ಆಸೆಗಳಿಲ್ಲ..! ದುಡ್ಡಿಗಿಂತ ಪ್ರೀತಿಗೆ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ..! ಅಪ್ಪ ಅಮ್ಮ ನಾ ಮುದ್ದಿನ ಮಗಳಾಗಿ.., ತಮ್ಮ ತಂಗಿಯರ ಪ್ರೀತಿಯ ಅಕ್ಕನಾಗಿ.., ಗೆಳೆಯ ಗೆಳತಿಯರಿಗೆ.., ನನ್ನ ಪ್ರೀತಿಸುವ ಜೀವಕ್ಕೆ.., ನಾನ್ ಇರುವ ತನಕ ಈ ಸಂಬಂಧ ಹೀಗೆ ಇರಬೇಕು ಅನ್ನೊ ಆಸೆಯಲ್ಲೆ ಬದುಕುತಿರುವ ಜೀವ ನನ್ನದು...☻

☻ನನಗಾಗಿ ನಾನು ಬದುಕಿ ಗೊತ್ತಿಲ್ಲ.., ಬೇರೆಯವರಲ್ಲೆ ನನ್ನ ಖುಷಿಯನ್ನು ಹುಡುಕುತ್ತೆ ನನ್ನ ಮನಸು..! ನನಗೆ ಈ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಬಿಟ್ಟು ಬೇರೆ ಏನು ಗೊತ್ತಿಲ್ಲ..!☻

☻ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಪ್ಪನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ Bt ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ☻

☻ಚಿಕ್ಕ, ಪುಟ್ಟ ಕನಸು ಕಾಣೋದು ಅಂದ್ರೆ ತುಂಬಾ ಇಷ್ಟ... ಅದರ ಜೊತೆಗೆ ಮಳೆಯಲ್ಲಿ ನೆನೀತಾ ಐಸ್ ಕ್ರೀಮ್ ತಿನ್ನೋದು.., ಇಬ್ಬನಿಯಲ್ಲಿ ವಾಕ್ ಮಾಡೋದು.., ಆಕಾಶ ನೋಡ್ತಾ ಕನಸು ಕಾಣೋದು.., ರಾತ್ರಿ ನಕ್ಷತ್ರ ಏಣಿಸೋದು.., ಮಕ್ಕಳ ಜೊತೆ ಆಟ ಆಡೋದು... ಇವೆಲ್ಲಾ ತುಂಬಾ ಇಷ್ಟ...☻

☻☻ ಯಾವಾಗಲು SoNg ಕೇಳ್ತಾನೇ ಇರ್ತೀನಿ... ಅಪ್ಪ ಅಂತು ಸಿಕ್ಕಪಟ್ಟೆ ಬೈತಾನೆ ಇರ್ತಾರೆ ಯಾಕ್ ಗೊತ್ತಾ... ನಿಮಗೆ ಗೊತ್ತಿರಬಹುದು ಇವಾಗ ಬರೋ ಹಾಡುಗಳು ಹೇಗೆ ಇರುತ್ತೆ ಪ್ಯಾರ್ ಗೆ ಆಗ್ಬಿಟ್ಟಿದೆ ನಮ್ದೂಕೆ ಪ್ಯಾರ್ ಗೆ ಆಗ್ಬಿಟ್ಟಿದೆ:p ಆಗಂತ ನಾವು ಕೇಳೊದು ಬಿಡಬಾರದು ಏನಂತೀರಿ ನಾನು ಕೇಳ್ತೀನಿ ಜೊತೆಗೆ ನನ್ ಜೊತೆ ಯಾರ್ ಯಾರ್ ಇರ್ತಾರೋ ಅವರು ಕೇಳಲೇಬೇಕು BcoZzZz ಪಾಪ ಅವರಿಗೂ ಬೇರೆ ದಾರಿನೆ ಇಲ್ಲ.... ಕೇಳಿ ಕೇಳಿಸಿ LiFe ನಿಮ್ಮದಾಗಿಸಿ ಅನ್ನೋ RuLeS ನಂದು ಅ ರೂಲ್ಸ್ ಪಾಲಿಸುತ್ತಾ ಬಂದಿದೇನೆ ಮೆಲೋಡಿ, ಜನಪದ ಗೀತೆ, FeElInG LoVe SoNgS.. ಹೄದಯಕ್ಕೆ ಹಾಗು ಮನಸಿಗೆ ಅರ್ಥಪೂರ್ಣವಿರುವ ಇಂಪಾದ ಹಾಡು ಇಷ್ಟ ಸೋನು ನಿಗಮ್ AnD ಶ್ರೇಯಾ ಘೋಷಾಲ್ Oh GoD ಏನ್ ಆಡ್ತಾರೆ SuPeRb ಅಲ್ವೆ ಅವರ VoIcE ಅಂತೂ ಸಿಕ್ಕಾ ಪಟ್ಟೆ ಇಷ್ಟ.... ಇನ್ನೂ ಆಗಿನ ಕಾಲದಲ್ಲಿ s.p ಬಾಲಸುಬ್ರಮಣ್ಯಂ SiR SoNg AlSo SuPeRb AnD ಎಸ್. ಜಾನಕಿ ಅಮ್ಮಾ ಅವರ ಹಾಡುಗಳು ಅದ್ಬುತ☻☻

☻☻ತುಂಬಾ ಫಿಲ್ಮ್ಸ್ ನೋಡ್ತೀನಿ... ಆಗಂತ ನೋಡಿದ ಫಿಲ್ಮ್ಸ್ ನೆ ಮತ್ತೆ ಮತ್ತೆ ನೋಡೊ ಹುಚ್ಹು ಹುಡುಗಿ ನನ್ ಅಂತೂ ಅಲ್ಲ... ಸೆಂಟಿಮೆಂಟ್ ಚಿತ್ರ ನೋಡ್ತಿದ್ರೆ ಸಾಕು ಕಣ್ರಿ ಅದು ಯಲ್ಲಿ ಇರುತ್ತೆ ಅಂಥಾನೆ ಗೊತಿಲ್ಲ ಕಣ್ಣೀರು ಬಂದು ಬಿಡುತ್ತೆ ನನಗೆ ಗೊತ್ತಿಲ್ಲ ಸುಮ್ನೆ ಆಳ್ತಾನೆ ಇರ್ತೀನಿ ಆಗಂತ ನನ್ ಯಾವಾಗಲು ಆಳ್ತಾನೆ ಇರೋ FiLm AcTrEsA ಶ್ರುತಿ ರಾಧಿಕ ಅಂತೂ ಅಲ್ವೆ ಅಲ್ಲ... ಈ ಕೆಳೆಗೆ ಹಾಕಿರೋ ಸಿನಿಮಾಗಳು ಇಷ್ಟ ಇನ್ನೂ ಇದೇ BuT ಸದ್ಯಕ್ಕೆ ನೆನಪು ಆಗ್ತಿರೋದು ಇಸ್ಟು NaNnU NaNnA KaNaSu.... ನಾನು ನನ್ನ ಕನಸು SaNjU WeDs GeEhA.... ಸಂಜು ವೆಡ್ಸ್ ಗೀತಾ MoGiNa MaNaSu.... ಮೊಗ್ಗಿನ ಮನಸು MiLaNa....... ಮಿಲನ GeEtHa..... ಗೀತಾ PrEeThI YeKe BhOoMi MeLiDe..... ಪ್ರೀತಿ ಯಾಕೆ ಭೂಮಿ ಮೇಲೆ MuSsAnje MaAtHu ಮುಸ್ಸಂಜೆ ಮಾತು☻☻

☻☻ನನಗೆ ಅಷ್ಟಾಗಿ ಪುಸ್ತಕದ ಓದೋ ಅಭ್ಯಾಸ ಏನ್ ಇಲ್ಲಾ ಕಣ್ರೀ ಅಬ್ಬಬ್ಬಾ ಅಂದರೆ ಒಂದನೇ ಪುಟ್ಟ. ಎರಡನೆಯ ಪುಟ್ಟ. ಮೂರನೆಯ ಪುಟ್ಟ ಓದೋದ್ ಒಳಗೆ ನಿದ್ದೆ ಬಂದು ಬಿಡುತ್ತೆ ಹಾಗಂತ??? ನನ್ ಏನ್ ನಿದ್ದೆ ಮಾಡೋಲ್ಲ ರವಿ ಬೆಳಗೆರೆ ಅವರ ಓ ಮನಸೇ ಪುಸ್ತಕ ತುಂಬಾ ಇಷ್ಟ... ಅವರು ಕೂಡ ತುಂಬಾ ಅಂದರೆ ತುಂಬಾ ಇಷ್ಟ ಅವರು ಮಾತಾಡೋದು ಇಷ್ಟ... ರವಿ ಬೆಳಗೆರೆಯವರು ಬರೆದಿರುವಂತಹ ಪ್ರತಿ ಪುಸ್ತಕದ ಹಿಂದೆ ಅವರ ಅವಿರತವಾದ ಶ್ರಮ ಹಾಗೂ ಅಛಲವಾದ ಶ್ರದ್ದೆಯಿರುತ್ತದೆ. ತನ್ನ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಪುಸ್ತಕಕ್ಕಾಗಿ ವ್ಯಯ ಮಾಡುವ ಓದುಗನಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎಂಬುದೇ ಇವರ ಉದ್ದೇಶ. ಕಾದಂಬರಿ, ಅನುವಾದಕೃತಿಗಳು, ಪ್ರವಾಸಲೇಖನ ಹೀಗೆ ಹಲವಾರು ಪ್ರಕಾರಗಳಲ್ಲಿ ಇವರ ಬರಹ ರೂಪು ಕಂಡುಕೊಂಡಿದೆ. ರವಿಬೆಳಗೆರೆಯವರ ಯಾವುದೇ ರೀತಿಯ ಪುಸ್ತಕವಾಗಲೀ ಅವರು ವಿಷಯವನ್ನು ಓದುಗರಿಗೆ ಪ್ರಸ್ತಾಪಿಸುವ ಶೈಲಿ, ಪಾತ್ರಗಳಲ್ಲಿನ ತೂಕ, ಸನ್ನಿವೇಶಗಳಲ್ಲಿನ ಸ್ವಾಭಾವಿಕತೆ, ಅನಿರೀಕ್ಷಿತ ತಿರುವುಗಳು ಓದುಗರನ್ನು ಒಂದು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಂದು ಪುಸ್ತಕವನ್ನು ಬರೆಯಲು ತೀರ್ಮಾನಿಸಿದಾಗಿನಿಂದ ಅದನ್ನು ಅಂತಿಮವಾಗಿ ಮುದ್ರಣಕ್ಕೆ ಕಳುಹಿಸಿ ಬಿಡುಗಡೆ ಮಾಡುವವರೆಗೂ ರವಿ ಬೆಳಗೆರೆಯವರು ಅದನ್ನು ಒಂದು ತಪಸ್ಸಿನ ರೀತಿ ಮಾಡಿರುತ್ತಾರೆ. ಬಿಡುಗಡೆಯಾದ ಕೂಡಲೇ ಮತ್ತೊಂದು ತಪಸ್ಸಿಗೆ ಕೂಡುತ್ತಾರೆ. ಒಮ್ಮೆ ಇವರ ಯಾವುದೇ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೆ ಸಂಪೂರ್ಣ ಓದಿ ಮುಗಿಸದ ಹೊರತು ಓದುಗರ ಮನಸ್ಸು ಪುಸ್ತಕದ ವಿಷಯ ಅದರಲ್ಲಿನ ಪಾತ್ರಗಳು ಸನ್ನಿವೇಶಗಳಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ಭೈರಪ್ಪನವರ ಎಲ್ಲಾ ಪುಸ್ತಕಗಳು, ತೇಜಸ್ವಿಯವರ ಕೆಲವು ಕಥೆಗಳು☻☻

☻☻ಕ್ರಿಕೆಟ್ ಸಿಕ್ಕಾ ಪಟ್ಟೆ ಆಡ್ತೀನಿ ನನ್ ಸೋಲಿಸೋಕೆ ಯಾರ್ ಇಂದನು ಆಗೋಲ್ಲ ಯಾಕ್ ಹೇಳಿ ನನ್ ಆಡೋದು ಮೊಬೈಲ್ ಮತ್ತೆ ಕಂಪ್ಯೂಟರ್ ಜೊತೆ ಅಸ್ಟೆ:p.. ಮಕ್ಕಳ ಜೊತೆ ಆಟ ಆಡೋದು ಅಂದ್ರೆ ಸಕ್ಕತ್ ಇಷ್ಟ ಯಾಕ್ ಅಂದ್ರೆ ಅವರ ಜೊತೆ ನಾವು ಮಕ್ಕಳ ಹಾಗೇ ಇರಬೋದು ಅದ್ಕೆ ಅವರ ಜೊತೆ ಆಡೋದು ಅಂದ್ರೆ ನಂಗೆ ಇಷ್ಟ... ಅದು ಬಿಟ್ರೆ FaCe BoOk ಚಾಟಿಂಗ್ ಹಾಗೇ W w E FiGhT ನೋಡೋದು,, ಅದರಲಿ ನನಗೆ jOhN CeNa ಇಷ್ಟ.. ಅವನು ಆಡೋದು ಮಾತ್ರ Miss ಮಾಡ್ದೆ ನೋಡ್ತೀನಿ☻☻

☻☻ಅಡುಗೆ ಮಾಡೋದು ತುಂಬಾ ಕಷ್ಟ... ತಿನ್ನಲು ಬಲು ಇಷ್ಟ.. ನನಗೆ ಮಾಡೋಕೆ ಬರೋಲ್ಲ ಆಗಂತ ಸುಮ್ನೆ ಏನ್ ಕೂತಿಲ್ಲ ಅಕ್ಕ ಮತ್ತೆ ನಾನು ಏನಾದರೂ ಮಾಡೋಕೆ TrY ಮಾಡ್ತಾನೆ ಇರ್ತೀವಿ super ಆಗಿ ಮಾಡ್ತೀವಿ... ನಂಗೆ ತುಂಬಾ ಇಷ್ಟವಾದ ಡಿಶ್ ಅಂದ್ರೆ GuLaB JaMuN.. ಗುಲಾಬ್ ಜಾಮೂನ್ ChIcKeN BiRyAnI. ಚಿಕನ್ ಬಿರಿಯಾನಿ RaSaGuLlA. ರಸಗುಲ್ಲಾ PaNi PuRi. ಪಾನಿಪೂರಿ ChUrUmUrI. ಚುರುಮುರಿ☻☻

☻ಕನಸುಗಳಿಲ್ಲದ ಕ್ಷಣ ನನ್ನ ಕನಸಿನಲ್ಲೂ ಇಲ್ಲ..! ಭಾವನೆಗಳಿಲ್ಲದ ಬದುಕು ತೀರಾ ಅಸಾಧ್ಯ ಹಾಗೂ Waste ಕೂಡ...
ಏನಂತೀರಾ..?☻

Monday, 19 December 2011

ಪ್ರೀತಿಯಿಂದ ಪ್ರೀತಿಯ ಹುಡುಕಾಟ...



ಯಾವ ಪ್ರೀತಿಯ ಹುಡುಕಾಟ ಅಂತಾ ನೀವು ಹುಡುಕ್ತಾ ಇದ್ದೀರಾ???
ಇದು ಒಂದು ಪ್ರೀತ್ಸೋ ಹೃದಯದ ಹುಡುಕಾಟ..!
ಹೌದು ನನಗಾಗಿ ಮಿಡಿಯುವಂತ ಒಂದು ಹೃದಯದ ಹುಡುಕಾಟ.., ನನ್ನೊಡಲಿನ ಪ್ರೀತಿಯಲ್ಲಾ ಆ ಹೃದಯಕ್ಕೆ ಮಾತ್ರ ಮೀಸಲಾಗಬೇಕು ಅನ್ನೋ ಹಂಬಲ..!



ಎಂಥಾ ಹುಚ್ಚು ಕನಸು 
ಅಲ್ವಾ..?




ಆದರೂ ಕೂಡ ಇದು ಸತ್ಯ..!
ಪ್ರತಿಯೊಬ್ಬರಿಗೂ ಕೂಡ ಅವರಿಗೋಸ್ಕರಾನೇ ಹಂಬಲಿಸುವ ಹಾಗೂ ಅವರ ಮನಸ್ಸಿನ ಅದೆಷ್ಟೋ ಅರ್ಥವಾಗದ ಭಾವನೆಗಳಿಗೆ ಸ್ಪಂದಿಸಿ ಮಿಡಿಯುವಂತಾ ಒಂದು ಹೃದಯದ ಹುಡುಕಾಟದಲ್ಲಿ ಇದ್ದೇ ಇರ್ತಾರೆ..! ಅದಕ್ಕೆ ನಾನೇನೂ ಹೊರತಲ್ಲ..
AnD ಅದು ಸಹಜ ಕೂಡ ಅಲ್ವಾ..?






ಹೇಳಲಾಗದ ಮನಸ್ಸಿನ ಭಾವನೆಗಳನ್ನೆಲ್ಲ ಅರ್ಥ ಮಾಡ್ಕೊಂಡು ಅದಕ್ಕೆ ಸ್ಪಂದಿಸುವಂತಾ ಒಂದು ಹೃದಯ ಜೊತೆಯಿದ್ದಲ್ಲಿ ಈ ಜೀವನ ಅನ್ನೋದು ಅದೆಷ್ಟು ಸುಂದರವಾಗಿರುತ್ತೆ..,
ಮತ್ತು ಅಂಥದ್ದೊಂದು ಹೃದಯ ಜೊತೆಲೀ ಇದ್ರೆ ಬದುಕಿಗೂ ಒಂದು ಸ್ಪೂರ್ತಿ ಹಾಗೂ ಅರ್ಥ ಸಿಗುತ್ತೆ..!


So.., ನನಗೂ ಅಂಥದ್ದೊಂದು ಹೃದಯದ ಪ್ರೀತಿ ಬೇಕು ಅನ್ನಿಸೋದರಲ್ಲಿ ತಪ್ಪೇನಿಲ್ಲಾ ಅಲ್ವಾ..?
ಈ ಜೀವನದಲ್ಲಿ ಬರೀ ನೋವನ್ನೆ ಸಹಿಸಿ ಮರೆತು ಹೋಗಿರುವಂತಾ ಅದೆಷ್ಟೋ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸಿ., ನೀರೆರೆದು ಪೋಷಿಸಲು ನನ್ನದು ಅಂತಾ ಪ್ರಿತ್ಸೋ ಒಂದು ಹೃದಯದ ಪ್ರೀತಿಯ ಅವಶ್ಯಕತೆ ಖಂಡಿತವಾಗ್ಲೂ ಇದೆ..!!


ಈ ಮನದಲ್ಲಿ ತುಂಬಿ ಹೋಗಿರುವಂತಾ ದುಃಖವನ್ನೆಲ್ಲಾ ಆಲಿಸಿ., ಮೌನದಲ್ಲಿ ಅಡಕವಾಗಿರುವಂತಾ ಅದೆಷ್ಟೋ ಮಾತುಗಳನ್ನ ಹೇಳದಲೇ ಅರ್ಥ ಮಾಡಿಕೊಳ್ಳುವಂತಾ ಮನಸ್ಸಿರೋ ಹೃದಯದ ಪ್ರೀತಿ ಬೇಕು..!


ಕಪಟ ರಹಿತ, ಸರಳ, ಮುಗ್ಢ ಮನಸ್ಸಿರೋ ಈ ಹೃದಯಕ್ಕೆ ಎಲ್ಲದ್ದಕ್ಕೂ ನಾನಿದ್ದೀನಿ ಅಂತಾ ಧೈರ್ಯ ತುಂಬಿ., ನೆರಳಾಗಿ ನಿಲ್ಲುವಂತಾ ಒಬ್ಬ ಹೃದಯವಂತನಾ ಪ್ರೀತಿ ಸಿಕ್ಕರೆ ಎಷ್ಟು ಚೆನ್ನ..!:)



ನನ್ನ ತಮಾಷೆಗಳಿಗೆ ಜೊತೆಯಾಗಿ ನಕ್ಕು., ಬೇಜಾರಾದಾಗ ಸಂತೈಸಿ., ಪ್ರೀತಿಯಾ ಆಳವನ್ನರಿಸುವಂತಾ ಒಂದು ಹೃದಯದ ಪ್ರೀತಿಯ ಪ್ರೀತಿ ಬೇಕು... ನಾನಲ್ಲಿ ನೆಲೆಸಬೇಕು., ಆ ಹೃದಯದ ಮಡಿಲಲ್ಲೆ ಈ ಹೃದಯದ ಬಡಿತ ನಿಲ್ಲಬೇಕು..!!:):)

9 comments:

  1. nivu andu kondanthe agali :)

    ReplyDelete
  2. ಬಯಸಿದ ಬಾಳು, ಜೊತೆಗೆ ಸಂಗಾತಿ ದೊರೆತು ಬಾಳು ಬಂಗಾರವಾಗಲಿ..

    ReplyDelete
  3. @ಮೌನರಾಗ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..:)

    ReplyDelete
  4. ಹಾಯ್ ನೇತ್ರಾ ಅವರೇ,
    ``ಕಪಟ ರಹಿತ, ಸರಳ, ಮುಗ್ಢ ಮನಸ್ಸಿರೋ ಈ ಹೃದಯಕ್ಕೆ ಎಲ್ಲದ್ದಕ್ಕೂ ನಾನಿದ್ದೀನಿ ಅಂತಾ ಧೈರ್ಯ ತುಂಬಿ., ನೆರಳಾಗಿ ನಿಲ್ಲುವಂತಾ ಒಬ್ಬ ಹೃದಯವಂತನಾ ಪ್ರೀತಿ ಸಿಕ್ಕರೆ ಎಷ್ಟು ಚೆನ್ನ..!:)``ಖಂಡಿತಾ ಇಂಥ ಹುಡುಗ ಸಿಕ್ಕೆ ಸಿಗತ್ತಾನೆ. ಶುಭಾಶಯಗಳು. ನಿಮ್ಮ ಲೇಖನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ.ಸೋ ನೈಸ,ಮತ್ತೆ ಇಂಥವೇ ಲೇಖನಗಳಿಗಾಗಿ ಕಾಯುತ್ತೆನೆ, ಬೇಗ ಬರೆದು ಓದಲು ಕೊಡಿ ಅಂತಾ ಪ್ರೀತಿಯ ಒತ್ತಾಯ ವಿದೆ.ಧನ್ಯವಾದಗಳೋಂದಿಗೆ ,
    -ಸಿದ್ದು ಆರ್ಟ್ಸ್ , http://siddu-arts.blogspot.in/
    www.savira-kanasu.blogspot.com

    ReplyDelete
    Replies
    1. (ಸಿದ್ದು ಆರ್ಟ್ಸ್) ಖಂಡಿತವಾಗ್ಲು ಬರಿಯೋಕೆ ಪ್ರಯತ್ನ ಮಾಡ್ತೀನಿ...:) ನಿಮ್ಮ ಅಭಿಪ್ರಾಯಕ್ಕೆ ತುಂಬು ಹೃದಯದ ಧನ್ಯವಾದ..:)

      Delete
  5. ನಿಮ್ಮ ಈ ಲೇಖನಕ್ಕೆ ನಾನು ಚಿರಋಣಿ ನೇತ್ರಾ......

    ReplyDelete