ನೆನಪಿನ ನವಿಲುಗರಿ..! ಯುವರ್ ಸ್ವೀಟ್ ಹಾರ್ಟ್ ಗೆಳತಿ... ಸಿಂಪಲ್ ಹುಡ್ಗಿ ನೇತ್ರಾ..

☻ನನ್ ಬಗ್ಗೆ ನಾನೇ ಹೇಳಬೇಕಾ... ಸರಿ ಹೇಳ್ತೀನಿ ಕೇಳಿ...☻

☻ಭಾವನಾ ಜೀವಿ.., ಅಭಿವ್ಯಕ್ತಿಯನ್ನು ಹೆಚ್ಚು ಇಷ್ಟ ಪಡುವ, ಪ್ರೀತಿಸುವ ಮತ್ತು ನಂಬುವ ಒಬ್ಳು ಸಾಮಾನ್ಯ ಹುಡುಗಿ ನಾನು... ಕಾರಣವಿಲ್ಲದೆನೇ ಖುಷಿಯಿಂದ ಇರಬಲ್ಲೆ..!☻

☻ನಾನು ಕನ್ನಡತಿ ಎಂಬ ಹೆಮ್ಮೆ ನನ್ಗೆ ಇದೇ, ಕನ್ನಡ ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ...☻

☻ಪುಟ್ಟ ಆಸೆಗಳನ್ನು ಹೊತ್ತಿರುವ ಪುಟ್ಟ ಹೃದಯ ನನ್ನದು...☻

☻ಕನಸುಗಳಿಗೆ ಭಾವನೆಗಳಿಗೆ ನನ್ನಲಿ ತುಂಬಾ ಜಾಗವಿದೆ... ಹೀಗೆ ಇರಬೇಕು ಅನ್ನೊ ಆಸೆಗಳಿದೆ.., ಇಲ್ಲದ್ದಿದರು ಅನುಸರಿಸಿ ಕೊಂಡು ಹೊಗುವ ತಾಳ್ಮೆನೂ ಇದೆ..!☻

☻ನನಗೆ ಹತ್ತಿರ ವಾದವರು ನನ್ನ ಜೊತೆಲೇ ಇರಬೇಕು ಅನ್ನೊ ಸ್ವಾರ್ಥಿ ನಾನು...☻

☻ಕೇವಲ ಕಲ್ಪನೆಯಲ್ಲೆ ಬದುಕುವ ಆಸೆಗಳಿಲ್ಲ..! ದುಡ್ಡಿಗಿಂತ ಪ್ರೀತಿಗೆ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ..! ಅಪ್ಪ ಅಮ್ಮ ನಾ ಮುದ್ದಿನ ಮಗಳಾಗಿ.., ತಮ್ಮ ತಂಗಿಯರ ಪ್ರೀತಿಯ ಅಕ್ಕನಾಗಿ.., ಗೆಳೆಯ ಗೆಳತಿಯರಿಗೆ.., ನನ್ನ ಪ್ರೀತಿಸುವ ಜೀವಕ್ಕೆ.., ನಾನ್ ಇರುವ ತನಕ ಈ ಸಂಬಂಧ ಹೀಗೆ ಇರಬೇಕು ಅನ್ನೊ ಆಸೆಯಲ್ಲೆ ಬದುಕುತಿರುವ ಜೀವ ನನ್ನದು...☻

☻ನನಗಾಗಿ ನಾನು ಬದುಕಿ ಗೊತ್ತಿಲ್ಲ.., ಬೇರೆಯವರಲ್ಲೆ ನನ್ನ ಖುಷಿಯನ್ನು ಹುಡುಕುತ್ತೆ ನನ್ನ ಮನಸು..! ನನಗೆ ಈ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಬಿಟ್ಟು ಬೇರೆ ಏನು ಗೊತ್ತಿಲ್ಲ..!☻

☻ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಪ್ಪನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ Bt ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ☻

☻ಚಿಕ್ಕ, ಪುಟ್ಟ ಕನಸು ಕಾಣೋದು ಅಂದ್ರೆ ತುಂಬಾ ಇಷ್ಟ... ಅದರ ಜೊತೆಗೆ ಮಳೆಯಲ್ಲಿ ನೆನೀತಾ ಐಸ್ ಕ್ರೀಮ್ ತಿನ್ನೋದು.., ಇಬ್ಬನಿಯಲ್ಲಿ ವಾಕ್ ಮಾಡೋದು.., ಆಕಾಶ ನೋಡ್ತಾ ಕನಸು ಕಾಣೋದು.., ರಾತ್ರಿ ನಕ್ಷತ್ರ ಏಣಿಸೋದು.., ಮಕ್ಕಳ ಜೊತೆ ಆಟ ಆಡೋದು... ಇವೆಲ್ಲಾ ತುಂಬಾ ಇಷ್ಟ...☻

☻☻ ಯಾವಾಗಲು SoNg ಕೇಳ್ತಾನೇ ಇರ್ತೀನಿ... ಅಪ್ಪ ಅಂತು ಸಿಕ್ಕಪಟ್ಟೆ ಬೈತಾನೆ ಇರ್ತಾರೆ ಯಾಕ್ ಗೊತ್ತಾ... ನಿಮಗೆ ಗೊತ್ತಿರಬಹುದು ಇವಾಗ ಬರೋ ಹಾಡುಗಳು ಹೇಗೆ ಇರುತ್ತೆ ಪ್ಯಾರ್ ಗೆ ಆಗ್ಬಿಟ್ಟಿದೆ ನಮ್ದೂಕೆ ಪ್ಯಾರ್ ಗೆ ಆಗ್ಬಿಟ್ಟಿದೆ:p ಆಗಂತ ನಾವು ಕೇಳೊದು ಬಿಡಬಾರದು ಏನಂತೀರಿ ನಾನು ಕೇಳ್ತೀನಿ ಜೊತೆಗೆ ನನ್ ಜೊತೆ ಯಾರ್ ಯಾರ್ ಇರ್ತಾರೋ ಅವರು ಕೇಳಲೇಬೇಕು BcoZzZz ಪಾಪ ಅವರಿಗೂ ಬೇರೆ ದಾರಿನೆ ಇಲ್ಲ.... ಕೇಳಿ ಕೇಳಿಸಿ LiFe ನಿಮ್ಮದಾಗಿಸಿ ಅನ್ನೋ RuLeS ನಂದು ಅ ರೂಲ್ಸ್ ಪಾಲಿಸುತ್ತಾ ಬಂದಿದೇನೆ ಮೆಲೋಡಿ, ಜನಪದ ಗೀತೆ, FeElInG LoVe SoNgS.. ಹೄದಯಕ್ಕೆ ಹಾಗು ಮನಸಿಗೆ ಅರ್ಥಪೂರ್ಣವಿರುವ ಇಂಪಾದ ಹಾಡು ಇಷ್ಟ ಸೋನು ನಿಗಮ್ AnD ಶ್ರೇಯಾ ಘೋಷಾಲ್ Oh GoD ಏನ್ ಆಡ್ತಾರೆ SuPeRb ಅಲ್ವೆ ಅವರ VoIcE ಅಂತೂ ಸಿಕ್ಕಾ ಪಟ್ಟೆ ಇಷ್ಟ.... ಇನ್ನೂ ಆಗಿನ ಕಾಲದಲ್ಲಿ s.p ಬಾಲಸುಬ್ರಮಣ್ಯಂ SiR SoNg AlSo SuPeRb AnD ಎಸ್. ಜಾನಕಿ ಅಮ್ಮಾ ಅವರ ಹಾಡುಗಳು ಅದ್ಬುತ☻☻

☻☻ತುಂಬಾ ಫಿಲ್ಮ್ಸ್ ನೋಡ್ತೀನಿ... ಆಗಂತ ನೋಡಿದ ಫಿಲ್ಮ್ಸ್ ನೆ ಮತ್ತೆ ಮತ್ತೆ ನೋಡೊ ಹುಚ್ಹು ಹುಡುಗಿ ನನ್ ಅಂತೂ ಅಲ್ಲ... ಸೆಂಟಿಮೆಂಟ್ ಚಿತ್ರ ನೋಡ್ತಿದ್ರೆ ಸಾಕು ಕಣ್ರಿ ಅದು ಯಲ್ಲಿ ಇರುತ್ತೆ ಅಂಥಾನೆ ಗೊತಿಲ್ಲ ಕಣ್ಣೀರು ಬಂದು ಬಿಡುತ್ತೆ ನನಗೆ ಗೊತ್ತಿಲ್ಲ ಸುಮ್ನೆ ಆಳ್ತಾನೆ ಇರ್ತೀನಿ ಆಗಂತ ನನ್ ಯಾವಾಗಲು ಆಳ್ತಾನೆ ಇರೋ FiLm AcTrEsA ಶ್ರುತಿ ರಾಧಿಕ ಅಂತೂ ಅಲ್ವೆ ಅಲ್ಲ... ಈ ಕೆಳೆಗೆ ಹಾಕಿರೋ ಸಿನಿಮಾಗಳು ಇಷ್ಟ ಇನ್ನೂ ಇದೇ BuT ಸದ್ಯಕ್ಕೆ ನೆನಪು ಆಗ್ತಿರೋದು ಇಸ್ಟು NaNnU NaNnA KaNaSu.... ನಾನು ನನ್ನ ಕನಸು SaNjU WeDs GeEhA.... ಸಂಜು ವೆಡ್ಸ್ ಗೀತಾ MoGiNa MaNaSu.... ಮೊಗ್ಗಿನ ಮನಸು MiLaNa....... ಮಿಲನ GeEtHa..... ಗೀತಾ PrEeThI YeKe BhOoMi MeLiDe..... ಪ್ರೀತಿ ಯಾಕೆ ಭೂಮಿ ಮೇಲೆ MuSsAnje MaAtHu ಮುಸ್ಸಂಜೆ ಮಾತು☻☻

☻☻ನನಗೆ ಅಷ್ಟಾಗಿ ಪುಸ್ತಕದ ಓದೋ ಅಭ್ಯಾಸ ಏನ್ ಇಲ್ಲಾ ಕಣ್ರೀ ಅಬ್ಬಬ್ಬಾ ಅಂದರೆ ಒಂದನೇ ಪುಟ್ಟ. ಎರಡನೆಯ ಪುಟ್ಟ. ಮೂರನೆಯ ಪುಟ್ಟ ಓದೋದ್ ಒಳಗೆ ನಿದ್ದೆ ಬಂದು ಬಿಡುತ್ತೆ ಹಾಗಂತ??? ನನ್ ಏನ್ ನಿದ್ದೆ ಮಾಡೋಲ್ಲ ರವಿ ಬೆಳಗೆರೆ ಅವರ ಓ ಮನಸೇ ಪುಸ್ತಕ ತುಂಬಾ ಇಷ್ಟ... ಅವರು ಕೂಡ ತುಂಬಾ ಅಂದರೆ ತುಂಬಾ ಇಷ್ಟ ಅವರು ಮಾತಾಡೋದು ಇಷ್ಟ... ರವಿ ಬೆಳಗೆರೆಯವರು ಬರೆದಿರುವಂತಹ ಪ್ರತಿ ಪುಸ್ತಕದ ಹಿಂದೆ ಅವರ ಅವಿರತವಾದ ಶ್ರಮ ಹಾಗೂ ಅಛಲವಾದ ಶ್ರದ್ದೆಯಿರುತ್ತದೆ. ತನ್ನ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಪುಸ್ತಕಕ್ಕಾಗಿ ವ್ಯಯ ಮಾಡುವ ಓದುಗನಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎಂಬುದೇ ಇವರ ಉದ್ದೇಶ. ಕಾದಂಬರಿ, ಅನುವಾದಕೃತಿಗಳು, ಪ್ರವಾಸಲೇಖನ ಹೀಗೆ ಹಲವಾರು ಪ್ರಕಾರಗಳಲ್ಲಿ ಇವರ ಬರಹ ರೂಪು ಕಂಡುಕೊಂಡಿದೆ. ರವಿಬೆಳಗೆರೆಯವರ ಯಾವುದೇ ರೀತಿಯ ಪುಸ್ತಕವಾಗಲೀ ಅವರು ವಿಷಯವನ್ನು ಓದುಗರಿಗೆ ಪ್ರಸ್ತಾಪಿಸುವ ಶೈಲಿ, ಪಾತ್ರಗಳಲ್ಲಿನ ತೂಕ, ಸನ್ನಿವೇಶಗಳಲ್ಲಿನ ಸ್ವಾಭಾವಿಕತೆ, ಅನಿರೀಕ್ಷಿತ ತಿರುವುಗಳು ಓದುಗರನ್ನು ಒಂದು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಂದು ಪುಸ್ತಕವನ್ನು ಬರೆಯಲು ತೀರ್ಮಾನಿಸಿದಾಗಿನಿಂದ ಅದನ್ನು ಅಂತಿಮವಾಗಿ ಮುದ್ರಣಕ್ಕೆ ಕಳುಹಿಸಿ ಬಿಡುಗಡೆ ಮಾಡುವವರೆಗೂ ರವಿ ಬೆಳಗೆರೆಯವರು ಅದನ್ನು ಒಂದು ತಪಸ್ಸಿನ ರೀತಿ ಮಾಡಿರುತ್ತಾರೆ. ಬಿಡುಗಡೆಯಾದ ಕೂಡಲೇ ಮತ್ತೊಂದು ತಪಸ್ಸಿಗೆ ಕೂಡುತ್ತಾರೆ. ಒಮ್ಮೆ ಇವರ ಯಾವುದೇ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೆ ಸಂಪೂರ್ಣ ಓದಿ ಮುಗಿಸದ ಹೊರತು ಓದುಗರ ಮನಸ್ಸು ಪುಸ್ತಕದ ವಿಷಯ ಅದರಲ್ಲಿನ ಪಾತ್ರಗಳು ಸನ್ನಿವೇಶಗಳಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ಭೈರಪ್ಪನವರ ಎಲ್ಲಾ ಪುಸ್ತಕಗಳು, ತೇಜಸ್ವಿಯವರ ಕೆಲವು ಕಥೆಗಳು☻☻

☻☻ಕ್ರಿಕೆಟ್ ಸಿಕ್ಕಾ ಪಟ್ಟೆ ಆಡ್ತೀನಿ ನನ್ ಸೋಲಿಸೋಕೆ ಯಾರ್ ಇಂದನು ಆಗೋಲ್ಲ ಯಾಕ್ ಹೇಳಿ ನನ್ ಆಡೋದು ಮೊಬೈಲ್ ಮತ್ತೆ ಕಂಪ್ಯೂಟರ್ ಜೊತೆ ಅಸ್ಟೆ:p.. ಮಕ್ಕಳ ಜೊತೆ ಆಟ ಆಡೋದು ಅಂದ್ರೆ ಸಕ್ಕತ್ ಇಷ್ಟ ಯಾಕ್ ಅಂದ್ರೆ ಅವರ ಜೊತೆ ನಾವು ಮಕ್ಕಳ ಹಾಗೇ ಇರಬೋದು ಅದ್ಕೆ ಅವರ ಜೊತೆ ಆಡೋದು ಅಂದ್ರೆ ನಂಗೆ ಇಷ್ಟ... ಅದು ಬಿಟ್ರೆ FaCe BoOk ಚಾಟಿಂಗ್ ಹಾಗೇ W w E FiGhT ನೋಡೋದು,, ಅದರಲಿ ನನಗೆ jOhN CeNa ಇಷ್ಟ.. ಅವನು ಆಡೋದು ಮಾತ್ರ Miss ಮಾಡ್ದೆ ನೋಡ್ತೀನಿ☻☻

☻☻ಅಡುಗೆ ಮಾಡೋದು ತುಂಬಾ ಕಷ್ಟ... ತಿನ್ನಲು ಬಲು ಇಷ್ಟ.. ನನಗೆ ಮಾಡೋಕೆ ಬರೋಲ್ಲ ಆಗಂತ ಸುಮ್ನೆ ಏನ್ ಕೂತಿಲ್ಲ ಅಕ್ಕ ಮತ್ತೆ ನಾನು ಏನಾದರೂ ಮಾಡೋಕೆ TrY ಮಾಡ್ತಾನೆ ಇರ್ತೀವಿ super ಆಗಿ ಮಾಡ್ತೀವಿ... ನಂಗೆ ತುಂಬಾ ಇಷ್ಟವಾದ ಡಿಶ್ ಅಂದ್ರೆ GuLaB JaMuN.. ಗುಲಾಬ್ ಜಾಮೂನ್ ChIcKeN BiRyAnI. ಚಿಕನ್ ಬಿರಿಯಾನಿ RaSaGuLlA. ರಸಗುಲ್ಲಾ PaNi PuRi. ಪಾನಿಪೂರಿ ChUrUmUrI. ಚುರುಮುರಿ☻☻

☻ಕನಸುಗಳಿಲ್ಲದ ಕ್ಷಣ ನನ್ನ ಕನಸಿನಲ್ಲೂ ಇಲ್ಲ..! ಭಾವನೆಗಳಿಲ್ಲದ ಬದುಕು ತೀರಾ ಅಸಾಧ್ಯ ಹಾಗೂ Waste ಕೂಡ...
ಏನಂತೀರಾ..?☻

Monday 26 December 2011

ಹುಡುಗಿಯರಿಗೆ i love you ಅನ್ನೋರು ಹೇಗಿರಬೇಕು



ಮೊಟ್ಟ ಮೊದಲಿಗೆ ಆಕೆಯ ಚಲನವಲನದ ಮೇಲೆ ನಿಗಾ ಇರಿಸಬೇಕು. ಹಾಗಂತಾ ಗ್ರೇಟ್ ವಿಲನ್ ವಜ್ರಮುನಿ ಥರಾ ಆಕೆಯನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರೆ ಕೆಲಸ ಕೆಡುತ್ತದೆ. ಆಕೆ ಗೆಳೆತನ ಸಿಕ್ಕರೆ ನಿಮ್ಮ ಅರ್ಧ ಕೆಲಸವಾದಂತೆ. ಹುಡುಗಿಯರಿಗೆ ತಮ್ಮ ಮಾತು ಕೇಳುವ ಹುಡುಗರೇ ಅಚ್ಚುಮೆಚ್ಚು. ಸೋ ದೇವರು ಕೊಟ್ಟಿರುವ ಎರಡು ಕಿವಿಯನ್ನು ಬಳಸಿ. ಆಕೆಗೆ ಮಾತಾಡಲು ಬಿಡಿ. ಆಕೆಗೆ ಮಾತಾಡಲು ಬಿಡಿ. ಆದರೆ ತಾಳ್ಮೆಯಿಂದ ವಿಶಯವನ್ನು ಕಸ್ಟಪಟ್ಟರೂ ಕೇಳಿಸಿಕೊಳ್ಳುವುದು ಮುಖ್ಯ. ಸುಮ್ಮನೆ ನಾಟಕವಾಡಿದರೆ ಅಸ್ಟೇ ಮತ್ತೆ ಅವಳತ್ತ ನೀವು ಸುಳಿಯಲು ಸಾಧ್ಯವಾಗುವುದಿಲ್ಲ.  


ಆಕಾರದಲ್ಲಿ ನೀವು ಹೇಗೆ ಇದ್ದರೂ, ಶುಭ್ರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಯಾವುದೋ ಸಿನಿಮಾದಲ್ಲಿ ಹೀರೋಯಿನ್ ರೌಡಿನ ಮೆಚ್ಚಿದಳು ಅಂದ್ರೆ ನಿಜ ಅನ್ನೋಕೆ ಆಗೋಲ್ಲ. ಹುಡುಗಿಯರು ಸಾಫ್ಟ್ ನೇಚರ್ ವುಳ್ಳ ಹುಡುಗರನ್ನು ಮೆಚ್ಚುವುದು ಸಾಮಾನ್ಯ. ನೀಟ್ ಆಗಿ ಶೇವ್ ಮಾಡಿಕೊಂಡು ರೇಮಂಡ್ ಸ್ಯೂಟಿಂಗ್ಸ್ ಮಾಡೆಲ್ ರೀತಿ ಆಕೆ ಮುಂದೆ ನಿಂತರೆ ಖಂಡಿತಾ ನಿಮಗೆ ಜಯ. ಆದರೆ ಓವರ್ ಆಗಿ ಕರಿಯಾ ಸಿನಿಮಾದಲ್ಲಿ ದರ್ಶನ್ ರೀತಿಯಲ್ಲಿ ಬಂದ ಹಾಗೆ ಬಂದರೆ ನಗೆಪಾಟಲಾಗುತ್ತೀರಿ ಜೋಕೆ...... ಸರಳತೆಮುಗ್ದತೆ, ವಿನಯ, ಒಳ್ಳೆಯ ನಡತೆ,,,  ಹಿರಿಯರಿಗೆ ಬಗ್ಗಿ ನಮಸ್ಕರಿಸುವುದುಇದೆಲ್ಲವೂ ಇದ್ರೆ ಸಾಕು  ಹುಡುಗಿಯರಿಗೆ.......

ಹೊಗಳಿಕೆಗೆ ಬೀಳದ ಪ್ರಾಣಿಯೇ ಇಲ್ಲ. ಸಮಯ ಸಿಕ್ಕಾಗಲೆಲ್ಲಾ ಆಕೆಯನ್ನು ಹೊಗಳುತ್ತಿರಿ,, ಆದರೆ ಅದೇ ಅಭ್ಯಾಸವಾಗಬಾರದು. . ಯಾಕಂದ್ರೆ ಹುಡುಗಿಯರಿಗೆ ಕೇಳಿದ್ದೆ  ಕೇಳೋಕೆ ಇಸ್ಟ ಆಗೋಲ್ಲ......
ನಗು ಅತ್ಯುತ್ತಮ ಮೆಡಿಸಿನ್. ಜಾಣ್ಮೆಯಿಂದ ನಗೆಹನಿಗಳನ್ನು ಆಕೆಯತ್ತ ತೇಲಿಬಿಡಿ. ಇನ್ನೊಬ್ಬರನ್ನು ತೆಗಳುವ ಜೋಕುಗಳು ಬೇಡವೇ ಬೇಡ. ನಿಮ್ಮನ್ನು ಬೇಕಾದರೆ ತೆಗಳಿಕೊಳ್ಳಿ. ನೋ ಪ್ರಾಬ್ಲಂ. ಜೋಕುಗಳೂ ಗೊತ್ತಿಲ್ಲವೆಂದರೆ ಪೆಚ್ಚುಮೋರೆ ಹಾಕಿಕೊಂಡು ಕೂಡಬೇಡಿ. ಮುಖದಲ್ಲಿ ಸದಾ ಮಂದಹಾಸ ಇರಲಿ.



Monday 19 December 2011

ಪ್ರೀತಿಯಿಂದ ಪ್ರೀತಿಯ ಹುಡುಕಾಟ...



ಯಾವ ಪ್ರೀತಿಯ ಹುಡುಕಾಟ ಅಂತಾ ನೀವು ಹುಡುಕ್ತಾ ಇದ್ದೀರಾ???
ಇದು ಒಂದು ಪ್ರೀತ್ಸೋ ಹೃದಯದ ಹುಡುಕಾಟ..!
ಹೌದು ನನಗಾಗಿ ಮಿಡಿಯುವಂತ ಒಂದು ಹೃದಯದ ಹುಡುಕಾಟ.., ನನ್ನೊಡಲಿನ ಪ್ರೀತಿಯಲ್ಲಾ ಆ ಹೃದಯಕ್ಕೆ ಮಾತ್ರ ಮೀಸಲಾಗಬೇಕು ಅನ್ನೋ ಹಂಬಲ..!



ಎಂಥಾ ಹುಚ್ಚು ಕನಸು 
ಅಲ್ವಾ..?




ಆದರೂ ಕೂಡ ಇದು ಸತ್ಯ..!
ಪ್ರತಿಯೊಬ್ಬರಿಗೂ ಕೂಡ ಅವರಿಗೋಸ್ಕರಾನೇ ಹಂಬಲಿಸುವ ಹಾಗೂ ಅವರ ಮನಸ್ಸಿನ ಅದೆಷ್ಟೋ ಅರ್ಥವಾಗದ ಭಾವನೆಗಳಿಗೆ ಸ್ಪಂದಿಸಿ ಮಿಡಿಯುವಂತಾ ಒಂದು ಹೃದಯದ ಹುಡುಕಾಟದಲ್ಲಿ ಇದ್ದೇ ಇರ್ತಾರೆ..! ಅದಕ್ಕೆ ನಾನೇನೂ ಹೊರತಲ್ಲ..
AnD ಅದು ಸಹಜ ಕೂಡ ಅಲ್ವಾ..?






ಹೇಳಲಾಗದ ಮನಸ್ಸಿನ ಭಾವನೆಗಳನ್ನೆಲ್ಲ ಅರ್ಥ ಮಾಡ್ಕೊಂಡು ಅದಕ್ಕೆ ಸ್ಪಂದಿಸುವಂತಾ ಒಂದು ಹೃದಯ ಜೊತೆಯಿದ್ದಲ್ಲಿ ಈ ಜೀವನ ಅನ್ನೋದು ಅದೆಷ್ಟು ಸುಂದರವಾಗಿರುತ್ತೆ..,
ಮತ್ತು ಅಂಥದ್ದೊಂದು ಹೃದಯ ಜೊತೆಲೀ ಇದ್ರೆ ಬದುಕಿಗೂ ಒಂದು ಸ್ಪೂರ್ತಿ ಹಾಗೂ ಅರ್ಥ ಸಿಗುತ್ತೆ..!


So.., ನನಗೂ ಅಂಥದ್ದೊಂದು ಹೃದಯದ ಪ್ರೀತಿ ಬೇಕು ಅನ್ನಿಸೋದರಲ್ಲಿ ತಪ್ಪೇನಿಲ್ಲಾ ಅಲ್ವಾ..?
ಈ ಜೀವನದಲ್ಲಿ ಬರೀ ನೋವನ್ನೆ ಸಹಿಸಿ ಮರೆತು ಹೋಗಿರುವಂತಾ ಅದೆಷ್ಟೋ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸಿ., ನೀರೆರೆದು ಪೋಷಿಸಲು ನನ್ನದು ಅಂತಾ ಪ್ರಿತ್ಸೋ ಒಂದು ಹೃದಯದ ಪ್ರೀತಿಯ ಅವಶ್ಯಕತೆ ಖಂಡಿತವಾಗ್ಲೂ ಇದೆ..!!


ಈ ಮನದಲ್ಲಿ ತುಂಬಿ ಹೋಗಿರುವಂತಾ ದುಃಖವನ್ನೆಲ್ಲಾ ಆಲಿಸಿ., ಮೌನದಲ್ಲಿ ಅಡಕವಾಗಿರುವಂತಾ ಅದೆಷ್ಟೋ ಮಾತುಗಳನ್ನ ಹೇಳದಲೇ ಅರ್ಥ ಮಾಡಿಕೊಳ್ಳುವಂತಾ ಮನಸ್ಸಿರೋ ಹೃದಯದ ಪ್ರೀತಿ ಬೇಕು..!


ಕಪಟ ರಹಿತ, ಸರಳ, ಮುಗ್ಢ ಮನಸ್ಸಿರೋ ಈ ಹೃದಯಕ್ಕೆ ಎಲ್ಲದ್ದಕ್ಕೂ ನಾನಿದ್ದೀನಿ ಅಂತಾ ಧೈರ್ಯ ತುಂಬಿ., ನೆರಳಾಗಿ ನಿಲ್ಲುವಂತಾ ಒಬ್ಬ ಹೃದಯವಂತನಾ ಪ್ರೀತಿ ಸಿಕ್ಕರೆ ಎಷ್ಟು ಚೆನ್ನ..!:)



ನನ್ನ ತಮಾಷೆಗಳಿಗೆ ಜೊತೆಯಾಗಿ ನಕ್ಕು., ಬೇಜಾರಾದಾಗ ಸಂತೈಸಿ., ಪ್ರೀತಿಯಾ ಆಳವನ್ನರಿಸುವಂತಾ ಒಂದು ಹೃದಯದ ಪ್ರೀತಿಯ ಪ್ರೀತಿ ಬೇಕು... ನಾನಲ್ಲಿ ನೆಲೆಸಬೇಕು., ಆ ಹೃದಯದ ಮಡಿಲಲ್ಲೆ ಈ ಹೃದಯದ ಬಡಿತ ನಿಲ್ಲಬೇಕು..!!:):)

Tuesday 20 September 2011

Feel of friendship


ಆಕಸ್ಮಿಕವಾಗಿ ನಮ್ಮ ಜೀವನಕ್ಕೆ ನಮಗೆ ಅರಿವಿಲ್ಲದಂತೆ ಕೆಲವರು ಬಂದು ಬಿಡ್ತಾರೆ.., ಹಾಗೆ ಬಂದವರು ಅಲ್ಲೇ ನಿಂತು ಮನಸ್ಸಿಗೆ ತುಂಬಾ ಹತ್ತಿರವಾಗ್ತಾರೆ... ಅವ್ರೂ ಯಾರೋ ಆದ್ರೆ ಇದ್ದಕ್ಕಿದ್ದಂತೆ ಈ ಮನಸ್ಸಿಗೆ ತುಂಬಾ ಹತ್ತಿರವಾಗಿ.., ಆಮೇಲೆ ಪ್ರಾಣಕ್ಕೆ ಪ್ರಾಣ ಬೇಕಾದ್ರೂ ಕೊಡ್ತೀನಿ, ಅದು ಏನೇ ಕಷ್ಟ ಬಂದ್ರೂ ಜೊತೆಲೇ ಇರ್ತೀನಿ ಅಂತಾ ನಿಂತ್ ಬಿಡ್ತಾರೆ... ಅವರೇ ಪ್ರೆಂಡ್ಸ್..!

ನಮಗೆ ಬಹಳಷ್ಟು ಜನ ಪ್ರೆಂಡ್ಸ್ ಇರ್ತಾರೆ.., ಕೆಲವರು ಬಾಲ್ಯ ಸ್ನೇಹಿತರು, ಸ್ಕೂಲ್ ಅಂಡ್ ಕಾಲೇಜ್ ಪ್ರೆಂಡ್ಸ್, ಇಂಟರ್ ನೆಟ್ ಗೆಳೆಯರು.., ಹೀಗೆ ಹೋದಲೆಲ್ಲಾ ಸ್ನೇಹಿತರ ದೊಡ್ಡ ಗುಂಪೇ ಸೃಷ್ಠಿಯಾಗುತ್ತೆ..! ಪ್ರೆಂಡ್ಸ್ ಏನೋ ತುಂಬಾ ಜನ ಇರ್ತಾರೆ ಆದ್ರೆ ನಿಜವಾದ ಗೆಳೆಯರು ತುಂಬಾ ಕಡಿಮೆ..! ಪ್ರೆಂಡ್ಸ್'ಗೂ, ಗೆಳೆಯರಿಗೂ ಏನು ವ್ಯತ್ಯಾಸ ಅಂತಾ ಯೋಚನೆ ಮಾಡ್ತಾ ಇದ್ದೀರಾ??

ಖಂಡಿತಾ ವ್ಯತ್ಯಾಸ ಇದೆ...

ಅಂದರೆ, ನಮ್ಮನ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರೋರು ಹಾಗೂ ನಾವೂ ಕೂಡ ಅರ್ಥ ಮಾಡಿಕೊಂಡಿರೋ ಪ್ರೆಂಡ್ಸ್ ಈ ಗೆಳೆಯರು ಅನ್ನೋ ಕ್ಯಾಟಗರಿನಲ್ಲಿ ಬರ್ತಾರೆ..!

ಇನ್ನೂ ಈ ಪ್ರೆಂಡ್ ಶಿಪ್ ಅನ್ನೋದು ಟೈಮ್, ಸ್ಟೆಟಸ್ ಅಂಡ್ ಮೆಟಲ್ ಮೆಚುರಿಟಿಗೆ ಅನುಗುಣವಾಗಿ ಚೇಂಜ್ ಆಗ್ತಾ ಹೋಗುತ್ತೆ... ಆದ್ರೆ ಕೆಲವರು ಮಾತ್ರ ಎಲ್ಲಾ ಟೈಮ್ ನಲ್ಲೂ ನಮ್ ಪ್ರೆಂಡ್ಸ್ ಆಗಿ ಜೊತೆಲೇ ಇರ್ತಾರೆ.. ಅದೇ ರಿಯಲ್ ಪ್ರೆಂಡ್ ಶಿಪ್..!

ಹಾಗೆ ನನ್ ವಿಷಯಕ್ಕೆ ಬರೋದಾದ್ರೆ.., ನನಗೆ ಸ್ವಲ್ಪ ಹಠ ಜಾಸ್ತಿ ಮತ್ತೆ ಅಷ್ಟೆ ಸ್ವಾಭಿಮಾನಿ ಕೂಡ..! ನನ್ ಮನಸ್ಸಿನ ಎಲ್ಲಾ ಭಾವನೆಗಳನ್ನ ಗೆಳೆಯರ ಜೊತೆ ಹಂಚಿಕೊಳ್ಳೋದು ಅಂದ್ರೆ ತುಂಬಾನೇ ಇಷ್ಟ... ಹಾಗೆ ಎಲ್ಲರನ್ನ ತುಂಬಾ ಬೇಗ ನಂಬಿ ಬಿಡ್ತೀನಿ.., ಅಂಡ್ ಹಾಗೆ ನಂಬಿದ ತುಂಬಾ ಜನ ಪ್ರೆಂಡ್ಸ್ ಮೋಸನೂ ಮಾಡಿದಾರೆ... ಆದರೆ ಅವರು ಬಂದು ಹೋದ ಹೆಜ್ಜೆ ಗುರುತು ಮಾತ್ರ ಈ ಮನಸ್ಸಿನಲ್ಲಿ ಹಾಗೆ ಶಾಶ್ವತವಾಗಿ ಉಳಿದು ಬಿಟ್ಟಿದೆ... ಅದು ಏನೇ ಇದ್ರೂ ಪ್ರೆಂಡ್ಸ್ ಅಂದ್ರೆ ಪ್ರಾಣ..!

ಅಂಡ್ ನಮ್ಮ ಜೀವನದಲ್ಲಿ ಎಷ್ಟು ಜನ ಪ್ರೆಂಡ್ಸ್ ಇದ್ದಾರೆ.., ಪ್ರೆಂಡ್ಸ್ ಸರ್ಕಲ್ ಎಷ್ಟು ದೊಡ್ಡದಿದೆ ಅನ್ನೋದು ಮುಖ್ಯವಲ್ಲ..! ಇರೋ ಪ್ರೆಂಡ್ ಶಿಪ್ ನಲ್ಲಿ ಜೀವ ಇದೆ ಅನ್ನೋದೆ ಮುಖ್ಯ..!
ಅದನ್ನ ತಿಳ್ಕೊಂಡಾಗ ಮಾತ್ರ ನಮ್ಮ ಜೀವನದಲ್ಲಿ ನಿಜವಾಗ್ಲೂ ಇರೋ "ಗೆಳೆಯರು" ಎಷ್ಟು ಎಂಬುದು ತಿಳಿದು ಈ ಜೀವನಕ್ಕೂ ಒಂದು ಅರ್ಥ ಸಿಗುತ್ತೆ..! ನನ್ ಜೀವನಕ್ಕೆ ಅಂತದೊಂದು ಅರ್ಥ ತಂದು ಕೊಟ್ಟಿರೋ ನನ್ ಎಲ್ಲಾ "ಗೆಳೆಯರಿಗೂ" ಒಂದು ಹ್ಯಾಟ್ಸ್ ಆಫ್..!

ನನ್ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋ ಗೆಳೆಯರು ನಿವಾಗ ಬಯಸುತ್ತೀರಾ???
ಹಾಗದ್ರೆ ನನ್ ಗೆಳೆತನ ಮಾಡಿ..!

Wednesday 14 September 2011

ಮನಸ್ಸೆಂಬ ಅಂಗಳದಲ್ಲಿ ನೊರೆಂಟು ಕನಸು

ಸ್ವಚ್ಚಂದವಾದ ಈ ಮನಸ್ಸಿನಲ್ಲಿ ನೂರೊಂದು ಕನಸುಗಳು ಪುಟ್ಟ ಗುಬ್ಬಚ್ಚಿಯಂತೆ ಬೆಚ್ಚನೆ ಮಲಗಿವೆ... ಆ ಕನಸುಗಳೇನೇ ಇದ್ದರೂ ಕೂಡ ವಾಸ್ತವವೇ ಸತ್ಯ... ಇದನ್ನ ತಿಳಿಯದೆ ಭ್ರಮೆಯಲ್ಲಿದ್ದ ಇಷ್ಟು ದಿನದ ಜೀವನವೆಲ್ಲಾ ವ್ಯರ್ಥ ಅನ್ನಿಸುತ್ತೆ....


ಆದರೂ ನಾಳೆಯ ನಿರೀಕ್ಷೆ ಇಲ್ಲದೆ.., ನೆನ್ನೆಯ ಅನೆನಪಿಲ್ಲದೆ ಬದುಕೋಕೆ ಸಾಧ್ಯನಾ? ಖಂಡಿತಾ ಇಲ್ಲಾ.... ನಾಳೆಯ ಬಗ್ಗೆ ಒಲುಮೆಯ ಕನಸು, ನೆನ್ನೆಯ ನೆನಪು, ಇಂದಿನ ಬದುಕು ಎಲ್ಲವೂ ಬೇಕೆ ಬೇಕು ಈ ಜೀವನಕ್ಕೆ ಅಲ್ವಾ.., ನೆನಪು ಎಂಬ ಸೂರಿನಡಿ ಕನಸಿನ ಮನೆ ಮಾಡಿ ನೀರಿಕ್ಷಿಸಿದ ನಾಳೆಯ ಬಗ್ಗೆ ಯೋಚಿಸುವುದೇ ಜೀವನ...


ಕನಸು ಕಾಣುವಂತ ಕಣ್ಠಿಗೆ ಕತ್ತಲೆಯೂ ಕೂಡ ಒಂದು ಕವನದ ಹಾಗೆ ಕಾಣುತ್ತೆ ಆದರೂ ಈ ಕಲ್ಪನೆ ಅನ್ನೋದು ಜೀವನಕ್ಕೆ ಅಲ್ಲಾ ಅದು ಕೇವಲ ಕವನಕ್ಕೆ ಮಾತ್ರ ಹಾಗೆ ಕನಸು ಬದುಕಿಗಲ್ಲಾ ಮನಸಿನ ಸಮಾದಾನಕ್ಕೆ ಮಾತ್ರ... ಯಾಕೆಂದರೆ ಕಂಡ ಕನಸ್ಸೆಲ್ಲಾ ನೆನಸಾಗಬೇಕು ಅಂತೇನು ಇಲ್ಲಾ ಹಾಗಂತ ಕನಸು ಕಾಣೋದ್ದನ್ನ ಬಿಟ್ಟರೆ ಜೀವನಕ್ಕೆ ಅರ್ಥನೂ ಇರೋದಿಲ್ಲಾ.... Bcz ಕನಸೇ ಬದುಕೋಕೆ ಸ್ಭೂರ್ತಿ ಅಲ್ವಾ.
......
ಹಾಗೇ ಈ ಕನಸು ಕಾಣೋಕೆ ಯಾವುದರ ಭೇದ ಕೂಡ ಯಾರು ಬೇಕಾದ್ರೊ ಕನಸು ಕಾಣಬಹುದು And ನನ್ ಹಾಗೆ ಕೆಲವು ವಿಚಿತ್ರ ಮನಸ್ಸುಗಳಲ್ಲಿ ಹುಚ್ಚು ಕನಸುಗಳು ಕೂಡ ಬರುತ್ವೆ..! But ಕೆಲವೊಂದು ಸಲ ಅದೇ ಹುಚ್ಚು ಕಲ್ಪನೆಯ ಕನಸುಗಳಿಂದ ಕಣ್ಠಂಚ್ಚಿನ ಕಣ್ಠೀರ ಹನಿಗಳು ಹೇಳದೆ ಕೇಳದೆ ಹೊರಗೆ ಬಂದು ಬಿಡ್ತವೆ... ದೇವರ ಸ್ನಷ್ಠಿ ಅನ್ನೊಂದು ಎಷ್ಟು ವಿಚಿತ್ರ ಅಲ್ವಾ........

ಏನೇ ಅಗಲಿ ಕನಸುಗಳಿಲ್ಲದೆ ಯಾವ ಜೀವನೂ ಇಲ್ಲ So ಕನಸು ಕಾಣ್ತಾ ಕಂಡ ಕನಸನ್ನ ನನಸು ಮಾಡೋಕೆ ಪ್ರಯತ್ನ ಮಾಡ್ತಾ And ನನಸಾಗದ ಕನಸುಗಳಿಗೆ ಮನಸ್ಸಿನಲ್ಲಿ ಮನೆ ಮಾಡ್ತಾ ಇರೋ ಒಂದು ಪುಟ್ಟ ಮನಸು ನಂದು ಈ ಪುಟ್ಟ ಮನಸ್ಸಿನ ಕನಸುಗಳು ನನಸಾಗಲಿ ಎಂದು ಹಾರೈಸಿ... LiEeU ಇಷ್ಟೆ

Sunday 11 September 2011

ಮನಸ್ಸು ಅದೆಷ್ಟು ವಿಚಿತ್ರ

ಮನಸ್ಸು ಅದೆಷ್ಟು ವಿಚಿತ್ರ.. ಎಲ್ಲರೂ ಸುತ್ತಲಿರುವಾಗ ಮನದಾಳದಲ್ಲಿ ಒಂಟಿತನ ಕುಟುಕುತ್ತಿದ್ದರೆ, ಒಬ್ಬಂಟಿಯಾಗಿದ್ದಾಗ ಮನದಲ್ಲಿ ನೆನಪಿನ ಜಾತ್ರೆ.. ಮೌನದ ಮೆರವಣಿಗೆ.. ಆದರೂ ಮನವಿಡೀ ಹಗುರ.. ಅದೇನೋ ತುಂಬಿಕೊಂಡ ಭಾವ..ಓ ಮನಸ್ಸೇ ನಿನ್ನ ಅರ್ಥ ಮಾಡ್ಕೊಳ್ಳೋದು ಹೇಗೆ????

Sunday 4 September 2011

" ಮೌನ ರಾಗ "

ಮೌನವೇ ಹೂವಬಾಣ ಮನಸಿನ ತಾಣ...........
ತಂಗಾಳಿಯ ತಂಪಿಗೆ
ತಾವರೆಯ ತವಕ ..............
ಮಿಡಿಯುವ ಮನಸಿಗೆ
ಸಂಗೀತದ ಗಮಕ...........
ಸಪ್ತಸಾಗರದ ಅಲೆಗಳಿಗೆ
ಸಾಗರದ ನಂಟು ..............

ಮೌನದ ಹೂವ
ಅರಳಿತು ನನಸಿನ ಅಂಗಳದಲ್ಲಿ.......
ನಯನಗಳು ಹಾಡಿತು
ಮೌನದ ಗೀತೆ .........
ಶೃತಿ ತಪಿದ ಗೀತೆಗೆ
ಮೌನದ ನಂಟು..............
ಮುಸಂಜೆಯ ಕಡೆಗೆ
ಮೌನದ ನಡ್ಡಿಗೆ................
ಮೌನದ ಸಂದೇಶ
ನೆನೆಯ ಆವೇಶ ..........

ಮುತಿನ ನೆನಪುಗಳು
ಮೌನದ ಮಾತುಗಳು..........
ವೊಲವಿನ ಕ್ಷಣಗಳು
ಜೀವನದ ಅನುಭವಗಳು .........
ಹೃದಯದ ಹಾಡು
ಈ ವೊಲವಿನ ಗೂಡು.....
ಎದೆಯಾಳದ ರಾಗ
ಈ ಮೌನ ರಾಗ.........................

ಎಂದಿಗೂ ನಿಮ್ಮ ಸ್ನೇಹದ ಸೇತುವೆ
 ಸಿಂಪಲ್ ಹುಡ್ಗಿ ನೇತ್ರಾ


ನೆನಪು

ಮತ್ತೆ ಮತ್ತೆ ಹುಟ್ಟುವ ಅಪರೂಪದ ಕನಸುಗಳಿಗೆ ಪುಟ್ಟ ಗೂಡು ಕಟ್ಟಿ ಕೊಡುವ
ಅತ್ತು ಅತ್ತು ಕಾಡುವ ನೆನಪಾಗುವ ನೆನಪುಗಳಿಗೆ ನಗುವ ನೆರಳ ತೋರಿಸುವ
ಕೈಯ ಹಿಡಿಧು ಮನಸು ಬಿಗಿದು ಸುಂದರ ಬದುಕಿಗೆ ಎಂದಿಗೂ ಜೊತೆಯಾಗುವ
ಮನದ ಮನೆಯೊಳಗೆ ಪ್ರೀತಿ ಹುಟ್ಟಿಸಿ ನಗುತ ನಗಿಸುವ ಗೆಳತಿ  Sîmplé Gäl Ñêthrä

Saturday 3 September 2011

ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ


ನಾ ಬಚ್ಚಿ-ಇಟ್ಟೆ  
ಮನಸ ಬಾವನೆಗಳ
ತಿಳಿದು ನೀ ನನ್ನಿಂದ
ದೂರಾಗಬಹುದೆಂದು.
ವಿಪರ್ಯಾಸವೆಂದರೆ,
ನಾ ಅರಿಯದೇ ಹೋದದ್ದು
ನೀ ದೂರವಾಗಲು 
ನಾ ಬಚ್ಚಿ -ಇಟ್ಟ ಮನದ
ಬಾವನೆಗಳೆ
ಕಾರಣವಾಗುವುದೆಂದು

ಅಮ್ಮಾ miss u

ಉಸಿರಾ ನೀಡಿ ಹೆಸರಾ ಬರೆಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಅಮ್ಮಾ!.. ಎಂದರೆ ಅಷ್ಟೇ ಸಾಕೇ?

ನೆನಪೇ!

ಕ್ಷಣ ಮಾತ್ರ ಹತ್ತಿರ ಸುಳಿದು
ನಗೆಯರಳಿಸುವ ನೆನಪೇ
ನೀ ನನ್ನ್ ಸಖನೇ?

ನಗುವಿನಲ್ಲೂ ಅಳುವ
ಹೆಕ್ಕಿ ತೆಗೆವ ನೆನಪೇ
ನೀ‌ ಪರಮ ಸಿನಿಕನೇ?

ಏಕಾಂತದಲಿ ಬೆಂದ ಮನಕೆ
ಸಾಂತ್ವನ ತರುವ ನೆನಪೇ
ನೀನಮೃತಸಿಂಚನವೇ?

ಭೂತದ ಗೋರಿಯ ಮೇಲೆ
ಕುಣಿ ಕುಣಿದಾಡುವ ನೆನಪೇ
ನೀ‌ ಕಾಡುವ ಪಿಶಾಚಿಯೇ?

ಗತದ ಗೋಡೆಗೆ ಬಡಿದು
ಮರಳಿ ಬರುವ ನೆನಪೇ
ನೀ‌ ನನ್ನಾತ್ಮಬಂಧುವೇ?

ಹೆಸರ ಹಂಗಿಲ್ಲದೆ ನನ್ನ
ಬರಸೆಳೆದು ಅಪ್ಪುವ ನೆನಪೇ
ನಮ್ಮದು ದಿವ್ಯ ಅನುಬಂಧವೇ?

ಬದುಕು..

ಹುಟ್ಟುವುದೆಲ್ಲೋ ಬೆಳೆಯುವುದೆಲ್ಲೋ...
ಬಾಳನೌಕೆಯನೇರಿ ಸೇರುವ ದಡವೆಲ್ಲೋ...

ಬದುಕಿನ ಪಯಣದ ದಾರಿ ಕಂಡಿಲ್ಲ ನಾವು...
ಬಾಳನೌಕೆಯನೇರಿ ಹೊರಟವರು ನಾವು...

ಜೀವನದ ರಸಘಳಿಗೆ ಸವಿದವರು ನಾವು...
ಬದುಕಿನ ಬೇಸರದ ಕಹಿಉಂಡವರು ನಾವು...

ಗೆಳೆಯರೊಡಗೂಡಿ ಕಳೆದ ಆ ಕ್ಷಣ...
ಮರಳಿ ಬರುವುದೇ ?? ಏಕಮುಖ ಪಯಣ...

ಒಮ್ಮೆ ಸಿಕ್ಕವರು ಮತ್ತೆ ಸಿಕ್ಕುವುದು ವಿರಳ...
ಜೊತೆಗೊಡಿ ನಡೆದಿರೆ ಬದುಕುವುದು ಸರಳ..
.

ಬಾಲ್ಯದ ನೆನಪು

ಮರುಕಳಿಸುತಿಹುದಿಂದು ಬಾಲ್ಯದಾ ನೆನಪು
ಕಳೆದು ಹೊದೀತೇನೊ ಅದರ ಹೊಳಪು...

ಬಾಲ್ಯದಲಿ ಆಡಿದ ಆ ಮಣ್ಣಿನಾಟ
ಎಲ್ಲರೊಡಗೊಡಿದ ಗೆಳೆಯರ ಒಡನಾಟ...

ಕಟ್ಟುತಿದ್ದೆವಂದು ಮರಳಿನ ಕಪ್ಪೆಗೊಡೊಂದ
ನಿನಕಿಂತ ನನಗೊಡು ದೊಡ್ಡದು ನೋಡು, ಎಂತಹಾ ಅಂದ...

ಅಂದು ನಾ ವಾಡಿದ ಮರಕೋತಿ ಆಟ
ಮರದಿಂದ ಕೆಳಬಿದ್ದು ಕಲಿತಂತಾ ಪಾಟ...

ಎಲ್ಲರಿಂದ ನನ್ನನಾ ಬಚ್ಚಿಟ್ಟು ಕಣ್ಣಾ ಮುಚ್ಚಾಲೆಯಲಿ
ಗೆಳೆಯನ ಕಣ್ತಪ್ಪಿಸಿ ಮುಟ್ಟಿದೆ ಗುರಿ ಸಂತಸದಲಿ...

ನಾವಾಡುತಿದ್ದ ಆ ಗಿಲ್ಲಿದಾಂಡು
ಅದಕೆಂದು ಸೇರುತಿದ್ದ ಹುಡುಗರ ದಂಡು...

ಅಪ್ಪನೊಡಗೊಡಿ ನಾ ಕಂಡ ಸಿನಿಮ
ಮನೆಪಾಟ ಮಾಡಿಲ್ಲ !!!! ಬೈದಿದ್ದಳಮ್ಮ...

ಅಂದು ದೀಪಾವಳಿಯಂದು ಕೈ ಸುಟ್ಟ ಹಣತೆ
ಅದಹೇಳಿ ಅಮ್ಮನಲಿ ಪಡೆದಂತ ಮಮತೆ...

ತಪ್ಪು ಲೆಕ್ಕವಮಾಡಿ ತಿಂದತ ಪೆಟ್ಟು
ಒಳ್ಳೆ ಹಾಡನು ಹಾಡಿ ಪಡೆದಂತಾ ಗಿಫ್ಟು...

ಓ ನನ್ನ ಬಾಲ್ಯವೇ ಮತ್ತೆ ಬರಲಾರೆಯಾ
ಆ ಮಧುರ ಸವಿಯಾದ ದಿನಗಳನು ತಾರೆಯಾ...

.

Friday 2 September 2011

ಚಿರಕಾಲ ಇರಲಿ ಈ ಸ್ನೇಹ

ಹೇ ನಮಸ್ತೆ ಕರುನಾಡಿಗೆ
ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು ||೨||

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ ಹಾಡು ಬಾರೊ ಪ್ರೇಮ ಜೀವಿ

ಚಿರಕಾಲ ಇರಲಿ ಈ ಸ್ನೇಹ
ಚಿರಕಾಲ ಇರಲಿ ಈ ಪ್ರೇಮ
ಚಿರಕಾಲ ಇರಲಿ ಈ ಹಾಡು
ಚಿರಕಾಲ ಇರಲಿ ಈ ನೆನಪು

ಪಕ್ಕದ ಊರು ನನ್ನೂರು ಹಿಂದೊಮ್ಮೆ ಎರಡು ಒಂದೂರು
ಇಲ್ಲಿನ ಜನರು ನಿನ್ನೋರು ಒಂದಾಗಿ ಇರುವ ಅನ್ನೋರು
ನಿಮ್ಮೂರ ದಾಸಪದ ನಮ್ಮೂರಲ್ಲಿ
ನಿಮ್ಮೂರ ಜಾನಪದ ನಮ್ಮೂರಲ್ಲಿ
ತಿಮ್ಮ ನಿಮ್ಮವನು ರಾಯ ನಮ್ಮವನು ನಮ್ಮ ದೇವರೊಂದೆ
ನಾನು ನಿಮ್ಮವನು ನೀನು ನಮ್ಮವನು ನಮ್ಮ ಆಸೆ ಒಂದೆ

ಸ್ನೇಹ ಜ಼ಿಂದಾಬಾದ್ ಪ್ರೀತಿ ಜ಼ಿಂದಾಬಾದ್

ಸಾವಿರ ವರುಷ ಹಾಯಾಗಿ ಬಾಳಿರಿ ನೀವು ಒಂದಾಗಿ
ನಮ್ಮಯ ಅತಿಥಿ ನೀವಾಗಿ ತುಂಬಿದೆ ಹೃದಯ ತಂಪಾಗಿ
ನಮ್ಮೂರ ಚಂದಿರನೆ ನಿಮ್ಮೂರಲ್ಲಿ ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲಾ ಸ್ನೇಹವೊಂದೆ
ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ ಎಲ್ಲಾ ಪ್ರೀತಿ ಒಂದೆ

ಸ್ನೇಹ......

ಸ್ನೇಹಿತರು ನಿಮ್ಮನು ಪ್ರೀತಿಸುತ್ತಾರೆ, ಅವರು ನಿಮ್ಮ ಪ್ರೇಮಿಯಲ್ಲ ನಿಮ್ಮನು ಆರೈಕೆ ಮಾಡುತ್ತಾರೆ, ಅವರು ನಿಮ್ಮ ಕುಟುಂಬದವರಲ್ಲ ನಿಮ್ಮ ನೋವನು ಹಂಚಿ ಕೊಳ್ಲುತ್ತಾರೆ, ಅವರು ನಿಮ್ಮ ಸಂಬಂಧಿಯಲ್ಲ ಅವರೆಲ್ಲ ನಿಜವಾದ ಸ್ನೇಹಿತರು ತಂದೆಯಂತೆ ಬಯುತ್ತರೆ ತಾಯಿಯಂತೆ ಆರೈಕೆ ಮಾಡುತ್ತಾರೆ ಅಕ್ಕ ತಂಗಿಯರು ಹಾಗೂ ಅಣ್ಣ ತಮ್ಮಂದಿರಾಂತೆ ರೇಗಿಸುತ್ತಾರೆ ಕೊನೆಯಲ್ಲಿ ನಿಮ್ಮ ಪ್ರೇಮಿಗಿಂತ ಜಾಸ್ತಿಯಾಗಿ ಪ್ರೀತಿಸುತ್ತಾರೆ ಅವರೇ ಆತ್ಮೀಯ ಹಾಗೂ ಪ್ರೀತ್ತಿಯ ಸ್ನೇಹಿತರು.

Thursday 1 September 2011

ಮುದ್ದು ಅಕ್ಕ ನಿಗೊಂದು ಪತ್ರ



ಮುದ್ದು ಅಕ್ಕ ಏನ್ ಅಂಥ ಬರೆಯಲಿ ನಿನ್ನ ನಿಷ್ಕಲ್ಮಶ ಪ್ರೀತಿಯ ಬಗ್ಗೆ...!! ಪದಗಳೇ ಸಾಕಾಗೊಲ್ಲ ನಿನ್ನ ಬಗ್ಗೆ ಬರಿಯೋಕೆ..!!...
ನೀನು ನನ್ನ ಅಕ್ಕಳಾಗಿ ಹುಟ್ಟಿದೆ ನನ್ ಪುಣ್ಯ..!! ನೆನಪು ಇದೆಯಾ ಅಕ್ಕ ನಿಂಗೆ..??
ನಾನು, ನೀನು ಒಟ್ಟಿಗೆ ಆಟ ಆಡ್ತಾ..., ನಿನ್ ಚಾಕಲೇಟ್ ನ ನಾನು ಕದ್ದು ತಿಂದು ಮುದ್ದು ಮುದ್ದಾದ ಜಗಳ ಮಾಡಿದು..,, ನೀನೆ ನನ್ನ ಮೊದಲ ಪ್ರೆಂಡ್ಸ್ ಕಣೇ ಅಕ್ಕ..!!

ನಿನ್ ಜೊತೆಯಲ್ಲೇ ನಿನ್ನ ಕೈ ಹಿಡಿದುಕೊಂಡು ಸ್ಕೂಲ್ ಗೆ ಹೊಗುತ್ತಿದ ಕ್ಷಣಗಳು
ನಂಗೂ ನಿನ್ ಥರಾನೇ ಡ್ರೆಸ್ ಮಾಡಿ ಕೊಡು ಅಂತ ನಾನು ಅಟ ಮಾಡ್ತಿದ ಆ ದಿನಗಳು...
ಸ್ಕೂಲ್ ಗೆ ಹೋಗಬೇಕಾದರೆ ರೋಡ್ ನಲ್ಲಿ ನನ್ನ ಮಗು ಥರ ಕರ್ಕೊಂಡು ಹೋಗ್ತಿದ್ದೆ.., ಸುತ್ತ ಮುತ್ತ ಫ್ರೆಂಡ್ಸ್ ಜೊತೆ ಆಟ ಆಡ್ಕೊಂಡು ಸ್ಕೂಲ್ ಬಿಟ್ಟು 
ಒಂದು ಗಂಟೆ ಆದ್ಮೇಲೆ ಮನೆಗೆ ಹೋಗ್ತೀವಿ..!!





ನಿನ್ನ ಜೊತೆಯಲ್ಲೇ ನಾನು ಊಟ ಮಾಡ್ತಿದ್ದೆ ನಂಗೂ ನೀನು ಊಟ ಮಾಡಿಸುತ್ತಿದ್ದೇ.., ಇವಾಗಲು ಹಾಗೇ ಇದ್ದೀವಿ ಅಲ್ವಾ ಸ್ವಲ್ಪನೂ ChAnGe ಹಾಗಿಲ್ಲ.. ನೋಡೋರ ಕಣ್ಣಿಗೆ ನಾವು ದೊಡ್ಡೋರು ಆದ್ರೆ ನಮಗೆ ನಾವು ಇನ್ನೂ ಚಿಕ್ಕವರು..!!
ಅಮ್ಮ ನಿನ್ಗೆ ಹೊಡಿದರೆ ನಾನು ಯಾಕ್ ಅಮ್ಮ ನನ್ ಅಕ್ಕನಿಗೆ ಹೊಡಿತ್ತೀಯ ಅಂತ ನಾನು ಅಮ್ಮ ಗೆ ಬೈತ್ತಿದೆ.., ನನಗೆ ಹೊಡಿದ್ರೆ ನೀನು ಅಳ್ತಾ ಇದೆ! ಅಲ್ವಾ ...,

ನೀನು ಏನೇ ತಿಂದ್ರು ನಂಗೂ ಕೊಡ್ತಿದ್ದೆ ಇವಾಗಲು ಅಸ್ಟೆ ಮೊದಲಿನ ಥರಾನೇ ಇದ್ದೀಯಾ
ಅಮ್ಮ ಬಿಟ್ಟು ಹೋದ್ಮೇಲೆ ನೀನೆ ಅಮ್ಮನ ಥರಾ ನೊಡ್ಕೊತ್ತಿದ್ದೀಯ.!!
ನೀನು ನನ್ನ ಜೀವ ಕಣೋ.., ನಿನ್ನ ಬಿಟ್ಟು ಇರೋಕೆ ಆಗೋಲ್ಲ ಅಕ್ಕ.., ಯಾವಾಗಲು ನೀನು ನನ್ನ ಜೊತೆಯಲ್ಲೇ ಇರಬೇಕು ಅನಿಸುತ್ತೆ.... ನಿನ್ನ ಬಿಟ್ಟು ನಾನು ಇರೋಕೆ ಅಂಗೋಲಾ.., ಮುಂದೆ ನೀನು ಮದುವೆ ಆಗಿ ಹೋಗ್ತೀಯ ಅನ್ನೊದನ್ನ ನೆನಪು ಮಾಡಿಕೊಂಡರೆ ತುಂಬಾ ಅಳು ಬರುತ್ತೆ;-(






ಇದೆಲ್ಲಾ
ನೆನಪಿಸಿಕೊಂಡರೆ ನನ್ನ ಕಾಣಲಿ ಒಂದು ಹನಿ ನೀರು ಹೊರಗೆ ಬರುತ್ತದೆ ಯಾಕೆ ಅಂತ ನಿಜಕ್ಕೂ ನನಗೆ ಗೊತ್ತಿಲ್ಲ ಅಕ್ಕ..???


ಜೊತೆ ಜೊತೆಯಲ್ಲೇ ಬೆಳೆದರೂ ನನಗು ನಿನಗು ತುಂಬಾ ವ್ಯತ್ಯಾಸಗಳಿವೆ...!!!
ನೀನೂ ತುಂಬಾ ಇಂಟಲಿಜೆನ್ಸ್.. BuT ನಾನು ದಡ್ಡಿ:P
ನಾನು FuUl LoOsU .., ನೀನು FuUl DeCeNt 
ಅದ್ರೆ ನಿನ್ ಮನಸು ನನ್ ಮನಸು ಒಂದೇ ಥರ


ಈ ನಿನ್ನ ತಂಗಿನ ನೀನು ತುಂಬಾ ಪ್ರೀತಿಸ್ತೀಯಾ ಅಲ್ವಾ ನಾನು ಅಸ್ಟೆ ಕಣೋ ಅಕ್ಕ ನಿನ್ನನು ಮರೆತು ಬದುಕಿರಲಾರೆ..,
ನಾನು ಏನೇ ಕೇಳಿದ್ರೂ ಇಲ್ಲ ಅನ್ನೋಳ ಎಲ್ಲಾ ಕೊಡಿಸ್ತೀಯ.!!
ಇವಾಗಲು ನಿನ್ನ ಜೊತೆ ಜಗಳ ಮಾಡ್ತೀನಿ.., ನೀನು ನನ್ನಗೆ ಹೊಡೆದು ಬುದ್ದಿ ಹೇಳ್ತೀಯ ಆದ್ರೆ ನಾನೇ CaReLeSs ಮಾಡ್ತೀನಿ.., ನಾನು ನಿನ್ ಜೊತೆ ಮುಚ್ಚು ಮರೆ ಇಲ್ಲದೆಯೇ ಹೇಳ ಹೇಳ್ತೀನಿ...


ನೀನು ಎಲ್ಲದರಲ್ಲೂ ಹೋಗಿದ್ದರೆ ನೀನು ಬರುವ ದಾರಿಯನ್ನೇ ಕಾಯುತ್ತ ಕುಳಿತಿರುತ್ತೇನೆ..,
ನೀನು ಬರೋದು ತಡವಾದರೆ ಮನಸು ವಿಲ ವಿಲ ಅಂಥಾ ಒದ್ದಾಡುತ್ತಾ ಇರುತ್ತದೆ ನಿನಗೆ ಸಣ್ಣ ನೋವಾದರೂ ನನಗೆ ತಡಿಯೋಕ್ಕೆ ಆಗೊಲ್ಲ.., ಅಕ್ಕ ತಂಗಿಯ ಸಂಬಂಧ ಅಂದ್ರೆ ಇದೇನಾ?? ಆ ದೇವರಿಗೆ ನಿನ್ ಅಂಥ ಅಕ್ಕನ ಕೊಟ್ಟಿದಕ್ಕೆ ThNx ಹೇಳಬೇಕು..!!
ಮುಂದಿನ ಜನ್ಮ ಅಂತ ಇದ್ರೆ ನೀನೆ ನನ್ನ ಅಕ್ಕ ಆಗಬೇಕು..,, ಮುಂದಿನ ಜನ್ಮ ಮಾತ್ರ ಅಲ್ಲ ಜನ್ಮ ಜನ್ಮದದಲ್ಲೂ ನೀನೆ ನನ್ನ ಅಕ್ಕ ಆಗಬೇಕು...:-)






ನಾನು ಮತ್ತು ನನ್ನ ಕನಸು..............






ಪುಟ್ಟ ಆಸೆಗಳನ್ನು ಹೊತ್ತಿರುವ ಪುಟ್ಟ ಹೃದಯ ನನ್ನದು..

ಕನಸುಗಳಿಗೆ ಭಾವನೆಗಳಿಗೆ ನನ್ನಲಿ ತುಂಬಾ ಜಾಗವಿದೆ... ಹೀಗೆ ಇರಬೇಕು ಅನ್ನೊ ಆಸೆಗಳಿದೆ.., ಇಲ್ಲದ್ದಿದರು ಅನುಸರಿಸಿ ಕೊಂಡು ಹೊಗುವ ತಾಳ್ಮೆನೂ ಇದೆ..!

ನನಗೆ ಹತ್ತಿರ ವಾದವರು ನನ್ನ ಜೊತೆಲೇ ಇರಬೇಕು ಅನ್ನೊ ಸ್ವಾರ್ಥಿ ನಾನು...

ಕೇವಲ ಕಲ್ಪನೆಯಲ್ಲೆ ಬದುಕುವ ಆಸೆಗಳಿಲ್ಲ..! ದುಡ್ಡಿಗಿಂತ ಪ್ರೀತಿಗೆ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ..! ಅಪ್ಪ ಅಮ್ಮ ನಾ ಮುದ್ದಿನ ಮಗಳಾಗಿ.., ತಮ್ಮ ತಂಗಿಯರ ಪ್ರೀತಿಯ ಅಕ್ಕನಾಗಿ.., ಗೆಳೆಯ ಗೆಳತಿಯರಿಗೆ.., ನನ್ನ ಪ್ರೀತಿಸುವ ಜೀವಕ್ಕೆ.., ನಾನ್ ಇರುವ ತನಕ ಈ ಸಂಬಂಧ ಹೀಗೆ ಇರಬೇಕು ಅನ್ನೊ ಆಸೆಯಲ್ಲೆ ಬದುಕುತಿರುವ ಜೀವ ನನ್ನದು...

ನನಗಾಗಿ ನಾನು ಬದುಕಿ ಗೊತ್ತಿಲ್ಲ.., ಬೇರೆಯವರಲ್ಲೆ ನನ್ನ ಖುಷಿಯನ್ನು ಹುಡುಕುತ್ತೆ ನನ್ನ ಮನಸು..! ನನಗೆ ಈ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಬಿಟ್ಟು ಬೇರೆ ಏನು ಗೊತ್ತಿಲ್ಲ..!

ಮೌನ

ಮನ ಮೌನವಾದ ಸಮಯ
ಕಣ್ಣ್ ರೆಪ್ಪೆಗಳ ಆಲಿಂಗನ
ಚಹರೆ ಕೆಂಬಣ್ಣಮಯ
ಮರುಕ್ಷಣವೆ ಕಂಬನಿಯ ಜನನ

ಒದ್ದೆಮಾಡುತ್ತ ಒಣಗಿದ ತುಟಿಯ
ಸ್ವಿಕರಿಸುತ್ತ ಬದುಕು ಕೊಟ್ಟಬಹುಮಾನ
ನೆನೆದು ನೊವುಕೊಟ್ಟ ಲಲನೆಯ
ನೊವಿನನೆನಪುಗಳ ಮಾಡಿರುವೆ ಜೋಪಾನ

ತಲೆಯಲ್ಲಿ ಹೊತ್ತುನಡೆದಿರುವೆ ನೆನಪಿನಬುತ್ತಿಯ
ಇಲ್ಲನನಗೀಗ ಯಾರಮೇಲೂ ಅಭಿಮಾನ
ಕಳೆದುಕೊಂಡಿರುವೆ ಸಹಿಸುವ ಶಕ್ತಿಯ
ದೂರಹೊಗುತ್ತಿದೆ ನೊಂದ ಮನ

WhAt Is ThE tRuE LoVe


preetisdavalu & preetisidavanu
yare tappu madidru nave sorry keltivi yake???
avaru bittodre anno bhayadinda...
but
hettavrige nave novu kotru saha yavattadru sorry keltiva??
illa yake heli???
navu avaran bitru avru namman bidalla...
thats true love... ♥ ♥ ♥

ಸ್ನೇಹದ ಸೇತುವೆ

ಸ್ನೇಹವೆಂಧರೆ ಬರಿ ಮಾತಲ್ಲ.......
ಪ್ರೀತಿ ಯೆಂಧರೆ ಬರಿ ಮೋಡಿಯಲ್ಲ.....
ಸ್ನೇಹಧ ರೂಪ ಪವಿತ್ರತೆ....
ಪ್ರೇಮಧ ಶಾಪ ಅಗಲಿಕೆ ....

ಹೇ ಪ್ರೇಮವೇ ಆಕರ್ಷಣೆ ಮಾಡಧಿರು...
ಹೇ ಸ್ನೇಹವೇ ಆಶ್ವಾಸನೆ ನೀಡಧಿರು...
ನೋವನ್ನು ಸುರಿಸುವುಧು ಪ್ರೇಮ...
ಕಣ್ಣೇರು ವರೆಸುವುಧು ಸ್ನೇಹ....

ಸ್ನೇಹ,ಪ್ರೇಮಧ ನಂಟು ,ಬಾಂಧವ್ಯಧ ಗಂಟು....
ಕಾಮನಬಿಲ್ಲಿನ ಕ್ಷಣಿಕ ಸೊಗಸು .....ಪ್ರೇಮ....
ನಿರ್ಮಲ ಮನಸಿನ ಹೋರಾಟ .....ಸ್ನೇಹ....
ಪ್ರೀತಿ ನಾಳೆಯ ಕನಸು....
ಸ್ನೇಹ ಬಧುಕಿನ ನನಸು....

ಎಂದಿಗೂ ನಿಮ್ಮ ಸ್ನೇಹದ ಸೇತುವೆ
Sîmplé Gäl Ñêthrä