ನೆನಪಿನ ನವಿಲುಗರಿ..! ಯುವರ್ ಸ್ವೀಟ್ ಹಾರ್ಟ್ ಗೆಳತಿ... ಸಿಂಪಲ್ ಹುಡ್ಗಿ ನೇತ್ರಾ..

☻ನನ್ ಬಗ್ಗೆ ನಾನೇ ಹೇಳಬೇಕಾ... ಸರಿ ಹೇಳ್ತೀನಿ ಕೇಳಿ...☻

☻ಭಾವನಾ ಜೀವಿ.., ಅಭಿವ್ಯಕ್ತಿಯನ್ನು ಹೆಚ್ಚು ಇಷ್ಟ ಪಡುವ, ಪ್ರೀತಿಸುವ ಮತ್ತು ನಂಬುವ ಒಬ್ಳು ಸಾಮಾನ್ಯ ಹುಡುಗಿ ನಾನು... ಕಾರಣವಿಲ್ಲದೆನೇ ಖುಷಿಯಿಂದ ಇರಬಲ್ಲೆ..!☻

☻ನಾನು ಕನ್ನಡತಿ ಎಂಬ ಹೆಮ್ಮೆ ನನ್ಗೆ ಇದೇ, ಕನ್ನಡ ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ...☻

☻ಪುಟ್ಟ ಆಸೆಗಳನ್ನು ಹೊತ್ತಿರುವ ಪುಟ್ಟ ಹೃದಯ ನನ್ನದು...☻

☻ಕನಸುಗಳಿಗೆ ಭಾವನೆಗಳಿಗೆ ನನ್ನಲಿ ತುಂಬಾ ಜಾಗವಿದೆ... ಹೀಗೆ ಇರಬೇಕು ಅನ್ನೊ ಆಸೆಗಳಿದೆ.., ಇಲ್ಲದ್ದಿದರು ಅನುಸರಿಸಿ ಕೊಂಡು ಹೊಗುವ ತಾಳ್ಮೆನೂ ಇದೆ..!☻

☻ನನಗೆ ಹತ್ತಿರ ವಾದವರು ನನ್ನ ಜೊತೆಲೇ ಇರಬೇಕು ಅನ್ನೊ ಸ್ವಾರ್ಥಿ ನಾನು...☻

☻ಕೇವಲ ಕಲ್ಪನೆಯಲ್ಲೆ ಬದುಕುವ ಆಸೆಗಳಿಲ್ಲ..! ದುಡ್ಡಿಗಿಂತ ಪ್ರೀತಿಗೆ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ..! ಅಪ್ಪ ಅಮ್ಮ ನಾ ಮುದ್ದಿನ ಮಗಳಾಗಿ.., ತಮ್ಮ ತಂಗಿಯರ ಪ್ರೀತಿಯ ಅಕ್ಕನಾಗಿ.., ಗೆಳೆಯ ಗೆಳತಿಯರಿಗೆ.., ನನ್ನ ಪ್ರೀತಿಸುವ ಜೀವಕ್ಕೆ.., ನಾನ್ ಇರುವ ತನಕ ಈ ಸಂಬಂಧ ಹೀಗೆ ಇರಬೇಕು ಅನ್ನೊ ಆಸೆಯಲ್ಲೆ ಬದುಕುತಿರುವ ಜೀವ ನನ್ನದು...☻

☻ನನಗಾಗಿ ನಾನು ಬದುಕಿ ಗೊತ್ತಿಲ್ಲ.., ಬೇರೆಯವರಲ್ಲೆ ನನ್ನ ಖುಷಿಯನ್ನು ಹುಡುಕುತ್ತೆ ನನ್ನ ಮನಸು..! ನನಗೆ ಈ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಬಿಟ್ಟು ಬೇರೆ ಏನು ಗೊತ್ತಿಲ್ಲ..!☻

☻ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಪ್ಪನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ Bt ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ☻

☻ಚಿಕ್ಕ, ಪುಟ್ಟ ಕನಸು ಕಾಣೋದು ಅಂದ್ರೆ ತುಂಬಾ ಇಷ್ಟ... ಅದರ ಜೊತೆಗೆ ಮಳೆಯಲ್ಲಿ ನೆನೀತಾ ಐಸ್ ಕ್ರೀಮ್ ತಿನ್ನೋದು.., ಇಬ್ಬನಿಯಲ್ಲಿ ವಾಕ್ ಮಾಡೋದು.., ಆಕಾಶ ನೋಡ್ತಾ ಕನಸು ಕಾಣೋದು.., ರಾತ್ರಿ ನಕ್ಷತ್ರ ಏಣಿಸೋದು.., ಮಕ್ಕಳ ಜೊತೆ ಆಟ ಆಡೋದು... ಇವೆಲ್ಲಾ ತುಂಬಾ ಇಷ್ಟ...☻

☻☻ ಯಾವಾಗಲು SoNg ಕೇಳ್ತಾನೇ ಇರ್ತೀನಿ... ಅಪ್ಪ ಅಂತು ಸಿಕ್ಕಪಟ್ಟೆ ಬೈತಾನೆ ಇರ್ತಾರೆ ಯಾಕ್ ಗೊತ್ತಾ... ನಿಮಗೆ ಗೊತ್ತಿರಬಹುದು ಇವಾಗ ಬರೋ ಹಾಡುಗಳು ಹೇಗೆ ಇರುತ್ತೆ ಪ್ಯಾರ್ ಗೆ ಆಗ್ಬಿಟ್ಟಿದೆ ನಮ್ದೂಕೆ ಪ್ಯಾರ್ ಗೆ ಆಗ್ಬಿಟ್ಟಿದೆ:p ಆಗಂತ ನಾವು ಕೇಳೊದು ಬಿಡಬಾರದು ಏನಂತೀರಿ ನಾನು ಕೇಳ್ತೀನಿ ಜೊತೆಗೆ ನನ್ ಜೊತೆ ಯಾರ್ ಯಾರ್ ಇರ್ತಾರೋ ಅವರು ಕೇಳಲೇಬೇಕು BcoZzZz ಪಾಪ ಅವರಿಗೂ ಬೇರೆ ದಾರಿನೆ ಇಲ್ಲ.... ಕೇಳಿ ಕೇಳಿಸಿ LiFe ನಿಮ್ಮದಾಗಿಸಿ ಅನ್ನೋ RuLeS ನಂದು ಅ ರೂಲ್ಸ್ ಪಾಲಿಸುತ್ತಾ ಬಂದಿದೇನೆ ಮೆಲೋಡಿ, ಜನಪದ ಗೀತೆ, FeElInG LoVe SoNgS.. ಹೄದಯಕ್ಕೆ ಹಾಗು ಮನಸಿಗೆ ಅರ್ಥಪೂರ್ಣವಿರುವ ಇಂಪಾದ ಹಾಡು ಇಷ್ಟ ಸೋನು ನಿಗಮ್ AnD ಶ್ರೇಯಾ ಘೋಷಾಲ್ Oh GoD ಏನ್ ಆಡ್ತಾರೆ SuPeRb ಅಲ್ವೆ ಅವರ VoIcE ಅಂತೂ ಸಿಕ್ಕಾ ಪಟ್ಟೆ ಇಷ್ಟ.... ಇನ್ನೂ ಆಗಿನ ಕಾಲದಲ್ಲಿ s.p ಬಾಲಸುಬ್ರಮಣ್ಯಂ SiR SoNg AlSo SuPeRb AnD ಎಸ್. ಜಾನಕಿ ಅಮ್ಮಾ ಅವರ ಹಾಡುಗಳು ಅದ್ಬುತ☻☻

☻☻ತುಂಬಾ ಫಿಲ್ಮ್ಸ್ ನೋಡ್ತೀನಿ... ಆಗಂತ ನೋಡಿದ ಫಿಲ್ಮ್ಸ್ ನೆ ಮತ್ತೆ ಮತ್ತೆ ನೋಡೊ ಹುಚ್ಹು ಹುಡುಗಿ ನನ್ ಅಂತೂ ಅಲ್ಲ... ಸೆಂಟಿಮೆಂಟ್ ಚಿತ್ರ ನೋಡ್ತಿದ್ರೆ ಸಾಕು ಕಣ್ರಿ ಅದು ಯಲ್ಲಿ ಇರುತ್ತೆ ಅಂಥಾನೆ ಗೊತಿಲ್ಲ ಕಣ್ಣೀರು ಬಂದು ಬಿಡುತ್ತೆ ನನಗೆ ಗೊತ್ತಿಲ್ಲ ಸುಮ್ನೆ ಆಳ್ತಾನೆ ಇರ್ತೀನಿ ಆಗಂತ ನನ್ ಯಾವಾಗಲು ಆಳ್ತಾನೆ ಇರೋ FiLm AcTrEsA ಶ್ರುತಿ ರಾಧಿಕ ಅಂತೂ ಅಲ್ವೆ ಅಲ್ಲ... ಈ ಕೆಳೆಗೆ ಹಾಕಿರೋ ಸಿನಿಮಾಗಳು ಇಷ್ಟ ಇನ್ನೂ ಇದೇ BuT ಸದ್ಯಕ್ಕೆ ನೆನಪು ಆಗ್ತಿರೋದು ಇಸ್ಟು NaNnU NaNnA KaNaSu.... ನಾನು ನನ್ನ ಕನಸು SaNjU WeDs GeEhA.... ಸಂಜು ವೆಡ್ಸ್ ಗೀತಾ MoGiNa MaNaSu.... ಮೊಗ್ಗಿನ ಮನಸು MiLaNa....... ಮಿಲನ GeEtHa..... ಗೀತಾ PrEeThI YeKe BhOoMi MeLiDe..... ಪ್ರೀತಿ ಯಾಕೆ ಭೂಮಿ ಮೇಲೆ MuSsAnje MaAtHu ಮುಸ್ಸಂಜೆ ಮಾತು☻☻

☻☻ನನಗೆ ಅಷ್ಟಾಗಿ ಪುಸ್ತಕದ ಓದೋ ಅಭ್ಯಾಸ ಏನ್ ಇಲ್ಲಾ ಕಣ್ರೀ ಅಬ್ಬಬ್ಬಾ ಅಂದರೆ ಒಂದನೇ ಪುಟ್ಟ. ಎರಡನೆಯ ಪುಟ್ಟ. ಮೂರನೆಯ ಪುಟ್ಟ ಓದೋದ್ ಒಳಗೆ ನಿದ್ದೆ ಬಂದು ಬಿಡುತ್ತೆ ಹಾಗಂತ??? ನನ್ ಏನ್ ನಿದ್ದೆ ಮಾಡೋಲ್ಲ ರವಿ ಬೆಳಗೆರೆ ಅವರ ಓ ಮನಸೇ ಪುಸ್ತಕ ತುಂಬಾ ಇಷ್ಟ... ಅವರು ಕೂಡ ತುಂಬಾ ಅಂದರೆ ತುಂಬಾ ಇಷ್ಟ ಅವರು ಮಾತಾಡೋದು ಇಷ್ಟ... ರವಿ ಬೆಳಗೆರೆಯವರು ಬರೆದಿರುವಂತಹ ಪ್ರತಿ ಪುಸ್ತಕದ ಹಿಂದೆ ಅವರ ಅವಿರತವಾದ ಶ್ರಮ ಹಾಗೂ ಅಛಲವಾದ ಶ್ರದ್ದೆಯಿರುತ್ತದೆ. ತನ್ನ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಪುಸ್ತಕಕ್ಕಾಗಿ ವ್ಯಯ ಮಾಡುವ ಓದುಗನಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎಂಬುದೇ ಇವರ ಉದ್ದೇಶ. ಕಾದಂಬರಿ, ಅನುವಾದಕೃತಿಗಳು, ಪ್ರವಾಸಲೇಖನ ಹೀಗೆ ಹಲವಾರು ಪ್ರಕಾರಗಳಲ್ಲಿ ಇವರ ಬರಹ ರೂಪು ಕಂಡುಕೊಂಡಿದೆ. ರವಿಬೆಳಗೆರೆಯವರ ಯಾವುದೇ ರೀತಿಯ ಪುಸ್ತಕವಾಗಲೀ ಅವರು ವಿಷಯವನ್ನು ಓದುಗರಿಗೆ ಪ್ರಸ್ತಾಪಿಸುವ ಶೈಲಿ, ಪಾತ್ರಗಳಲ್ಲಿನ ತೂಕ, ಸನ್ನಿವೇಶಗಳಲ್ಲಿನ ಸ್ವಾಭಾವಿಕತೆ, ಅನಿರೀಕ್ಷಿತ ತಿರುವುಗಳು ಓದುಗರನ್ನು ಒಂದು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಂದು ಪುಸ್ತಕವನ್ನು ಬರೆಯಲು ತೀರ್ಮಾನಿಸಿದಾಗಿನಿಂದ ಅದನ್ನು ಅಂತಿಮವಾಗಿ ಮುದ್ರಣಕ್ಕೆ ಕಳುಹಿಸಿ ಬಿಡುಗಡೆ ಮಾಡುವವರೆಗೂ ರವಿ ಬೆಳಗೆರೆಯವರು ಅದನ್ನು ಒಂದು ತಪಸ್ಸಿನ ರೀತಿ ಮಾಡಿರುತ್ತಾರೆ. ಬಿಡುಗಡೆಯಾದ ಕೂಡಲೇ ಮತ್ತೊಂದು ತಪಸ್ಸಿಗೆ ಕೂಡುತ್ತಾರೆ. ಒಮ್ಮೆ ಇವರ ಯಾವುದೇ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೆ ಸಂಪೂರ್ಣ ಓದಿ ಮುಗಿಸದ ಹೊರತು ಓದುಗರ ಮನಸ್ಸು ಪುಸ್ತಕದ ವಿಷಯ ಅದರಲ್ಲಿನ ಪಾತ್ರಗಳು ಸನ್ನಿವೇಶಗಳಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ಭೈರಪ್ಪನವರ ಎಲ್ಲಾ ಪುಸ್ತಕಗಳು, ತೇಜಸ್ವಿಯವರ ಕೆಲವು ಕಥೆಗಳು☻☻

☻☻ಕ್ರಿಕೆಟ್ ಸಿಕ್ಕಾ ಪಟ್ಟೆ ಆಡ್ತೀನಿ ನನ್ ಸೋಲಿಸೋಕೆ ಯಾರ್ ಇಂದನು ಆಗೋಲ್ಲ ಯಾಕ್ ಹೇಳಿ ನನ್ ಆಡೋದು ಮೊಬೈಲ್ ಮತ್ತೆ ಕಂಪ್ಯೂಟರ್ ಜೊತೆ ಅಸ್ಟೆ:p.. ಮಕ್ಕಳ ಜೊತೆ ಆಟ ಆಡೋದು ಅಂದ್ರೆ ಸಕ್ಕತ್ ಇಷ್ಟ ಯಾಕ್ ಅಂದ್ರೆ ಅವರ ಜೊತೆ ನಾವು ಮಕ್ಕಳ ಹಾಗೇ ಇರಬೋದು ಅದ್ಕೆ ಅವರ ಜೊತೆ ಆಡೋದು ಅಂದ್ರೆ ನಂಗೆ ಇಷ್ಟ... ಅದು ಬಿಟ್ರೆ FaCe BoOk ಚಾಟಿಂಗ್ ಹಾಗೇ W w E FiGhT ನೋಡೋದು,, ಅದರಲಿ ನನಗೆ jOhN CeNa ಇಷ್ಟ.. ಅವನು ಆಡೋದು ಮಾತ್ರ Miss ಮಾಡ್ದೆ ನೋಡ್ತೀನಿ☻☻

☻☻ಅಡುಗೆ ಮಾಡೋದು ತುಂಬಾ ಕಷ್ಟ... ತಿನ್ನಲು ಬಲು ಇಷ್ಟ.. ನನಗೆ ಮಾಡೋಕೆ ಬರೋಲ್ಲ ಆಗಂತ ಸುಮ್ನೆ ಏನ್ ಕೂತಿಲ್ಲ ಅಕ್ಕ ಮತ್ತೆ ನಾನು ಏನಾದರೂ ಮಾಡೋಕೆ TrY ಮಾಡ್ತಾನೆ ಇರ್ತೀವಿ super ಆಗಿ ಮಾಡ್ತೀವಿ... ನಂಗೆ ತುಂಬಾ ಇಷ್ಟವಾದ ಡಿಶ್ ಅಂದ್ರೆ GuLaB JaMuN.. ಗುಲಾಬ್ ಜಾಮೂನ್ ChIcKeN BiRyAnI. ಚಿಕನ್ ಬಿರಿಯಾನಿ RaSaGuLlA. ರಸಗುಲ್ಲಾ PaNi PuRi. ಪಾನಿಪೂರಿ ChUrUmUrI. ಚುರುಮುರಿ☻☻

☻ಕನಸುಗಳಿಲ್ಲದ ಕ್ಷಣ ನನ್ನ ಕನಸಿನಲ್ಲೂ ಇಲ್ಲ..! ಭಾವನೆಗಳಿಲ್ಲದ ಬದುಕು ತೀರಾ ಅಸಾಧ್ಯ ಹಾಗೂ Waste ಕೂಡ...
ಏನಂತೀರಾ..?☻

Wednesday 26 December 2012

ಮುಗ್ಧ ಹೃದಯಕ್ಕೆ ಮಾತ್ರ ಮೀಸಲು ನನ್ನ ಹೃದಯದ ಮುದ್ದು ಪ್ರೀತಿ

ಮುಗ್ಧ ಹೃದಯಕ್ಕೆ ಮಾತ್ರ ಮೀಸಲು ನನ್ನ ಹೃದಯದ ಮುದ್ದು ಪ್ರೀತಿ
ಮುಗ್ಧ ಪ್ರೀತಿ ಯಾರಿಂದ ಯಾರಿಗಾಗಿ ಯಾರಿಗೋಸ್ಕರ ಯಾವಾಗ ನಮ್ಮಗೂ ತಿಳಿಯದಂತೆ ಬೇರೆಯೊಂದು ಮುಗ್ಧ ಹೃದಯದ ಹೆಸರನ್ನು ಗುನುಗುತ್ತಾ ಒಂದೇ ಸಮನೆ ನಮ್ಮ ಹೃದಯ ಅವರಿಗೋಸ್ಕರ ಮಿಡಿಯುತ್ತದೆ ಅನ್ನೋದು ಯಾರಿಗೂ ಗೊತ್ತಾಗೊಲ್ಲ ಈ ಪ್ರೀತಿ ಹುಟ್ಟೋದೆ ಹೇಗೆ ಅರಿವಿಲ್ಲದೆ ಹುಟ್ಟುತ್ತೆ ಅರಿತುಕೊಳ್ಳುವಷ್ಟು ಗಳಿಸುತ್ತದೆ ಪ್ರೀತಿನ ಎಲ್ಲರು ಅವರ ಹೃದಯದಲ್ಲಿ ಕಪ್ಪೆ ಚಿಪ್ಪಿನಂತೆ ಬಚ್ಚಿಟ್ಟುಕೊಂಡಿರುತ್ತರೆ ಏನೂ ಅರಿಯದ ಮುದ್ದಾದ ಪೆದ್ದು ಹೃದಯದಲ್ಲಿ ದೊಡ್ಡ ಹೆಸರನೆ ಮಾಡಿಬಿಡುತ್ತದೆ ನಾವು ಪ್ರೀತಿಸುವವರನ್ನು ನಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ ಬಿಡ್ತೀವಿ ತಪ್ಪೇನೂ ಇಲ್ಲ ನಮ್ಮಗಿಂತಲೂ ನಾವು ಪ್ರೀತಿಸುವವರೇ ನಮಗೆ ಅಚ್ಚು ಮೆಚ್ಚು ಈ ಪ್ರಾಣಾನೇ ಅವರದು ಅಂದ ಮೇಲೆ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ಸೋದರಲ್ಲಿ ತಪ್ಪೇನೂ ಇಲ್ಲ....,

ಏನೇ ನೋವು ಇದ್ರು ನಾವು ಪ್ರೀತಿಸುವ ಜೀವ ನಮ್ ಜೊತೆ ನಮ್ಮ ಕಣ್ಣ ಮುಂದೇನೆ ಇದ್ರೆ ಸಾಕು ಮನಸಿನ ಏಲ್ಲಾ ನೋವನ್ನೂ ಮರೆತು ಅವರ ಜೊತೆ ಪುಟ್ಟ ಮಗುವಾಗಿ ಬಿಡ್ತೀವಿ ಅಂತಹ ಪ್ರೀತಿಯನ್ನು ನಮಗೆ ಮಿಸಲಿಟ್ಟ ಕಾಣದ ದೇವರಿಗೆ ಮನಸ್ಸಲ್ಲೇ ಪ್ರತಿ ಬಾರಿ ನಮಿಸುತ್ತೇನೆ..., ಪ್ರೀತಿಗೆ ಪ್ರೀತಿನೆ ಸಾಟಿ ಅಲ್ವಾ ಪ್ರೀತಿ ಮುಂದೆ ಬೇರೆದೆಲ್ಲ ಚಿಕ್ಕದಾಗಿ ಕಾಣುತ್ತೆ ಎಂಥವರನ್ನು ತನ್ನ ಬಳಿ ಸೆಳೆದುಕೊಳ್ಳುವಂತಹ ಶಕ್ತಿ ಇರೋದು ಈ ಪ್ರೀತಿಗೆ ಮಾತ್ರ ಮಗುವಿನಂತಹ ಮುಗ್ಧ ಪ್ರೀತಿಗೆ ಬೆಲೆ ಕಟ್ಟೋಕೆ ಯಾರಿಂದಲೂ ಆಗೋಲ್ಲ ಈ ಪ್ರೀತಿ ಕೆಲವು ಒಂದ್ ಸಾರಿ ಎಸ್ಟು ವಿಚಿತ್ರ ಅನಿಸಿಬಿಡುತ್ತದೆ ಅಲ್ವಾ ಯಾಕ್ ಹೇಳ್ತಾ ಇದ್ದೀನಿ ಅಂದ್ರೆ ಎಲ್ಲೋ ಇರುವವರನ್ನು ಇನ್ನೆಲ್ಲೋ ಇರುವವರಿಗೆ ಪ್ರೀತಿ ಎಂಬ ದಾರದಲ್ಲಿ ಬಂದಿ ಮಾಡಿ ಬಿಡುತ್ತದೆ...,

ಕನಸೊಂದಿದ್ದರೆ ಸಾಕು ಕಟ್ಟಿ ಹಾಕಬಹುದು ಪ್ರೀತಿಯೆಂಬ ದರದಲಿ ಕನಸಿನಲಿ ಬಂದವನ
ಎಂಥಹ ಕಲ್ಲು ಹೃದಯದವರು ಕೂಡಾ ಪ್ರೀತಿಯ ಮುಂದೆ ಕರಗಿ ನೀರಾಗಿ ಪ್ರೀತಿಯ ಮಳೆ ಸುರಿಸೆ ಬಿಡ್ತಾರೆ ಕೊನೆಗೆ ಪ್ರೀತಿಗೆ ಶರಣಾಗಿ ಬಿಡ್ತಾರೆ... ಕೋಟಿ ಕೋಟಿ ಪ್ರೇಮಿಗಳು ಎಸ್ಟೆ ಪ್ರೀತಿಯ ಬಗ್ಗೆ ಬಣ್ಣಿಸಿದ್ದರು ಪ್ರೀತಿಯ ಬಣ್ಣನೆ ಎಂದೂ ಮುಗಿಯೋದಿಲ್ಲ ಎಸ್ಟೆ ಕೋಟಿ ಕೋಟಿ ತಾರೆಗಳು ತುಂಬಿದರು ಆಕಾಶ ಪೂರ್ಣಗೊಳ್ಳಲ ಹಾಗೇ ಪ್ರೀತಿಯ ಬಗ್ಗೆ ಯಾರು ಎಸ್ಟೆ ಹೇಳಿದ್ರು ಅದು ಪ್ರೀತಿಯ ಮುಂದೆ ಕಮ್ಮಿ ಅನಿಸದೇ ಇರೋಲ್ಲ ಯಾರು ಏನೇ ಗೀಚಿ ಹೋದರೂ ಪ್ರೀತಿಯ ಮುಂದೆ ಅದು ಏನ್ ಏನೂ ಅಲ್ಲ..., ಒಂದು ಸಲ ಯೋಚನೆ ಮಾಡಿ ನೋಡಿ ನಮಗಾಗಿ ನಮಗೋಸ್ಕರ ನಮಗಾಗಿಯೇ ಮಾತ್ರ ಹಂಬಲಿಸುವ ನಮ್ಮನ್ನ ತುಂಬಾನೆ ಕಾಳಜಿ ಮಾಡುವ ನಮ್ಮ ಚಿಂತೆಯಲ್ಲೇ ಊಟ ನಿದ್ದೆ ಎಲ್ಲಾ ಬಿಟ್ಟು ನಮ್ಮಗಾಗಿಯೇ ಮಿಡಿಯುವ ಒಂದು ಪುಟ್ಟ ನಿಷ್ಕಲ್ಮಶ ಹೃದಯ ಸಿಕ್ಕರೆ ಯಾರ್ ತಾನೇ ಬೇಡ ಅಂತಾರೆ ಹೇಳಿ ಅಂತಹ ಹೃದಯದ ಜೊತೆ ನಮ್ಮ ಹೃದಯ ನಮಗೆ ಅರಿವಿಲ್ಲದಂತೆ ಬೆರೆತು ಹೋಗುತ್ತದೆ...,


ಏನು ತಿಳಿಯದ ಮುಗ್ಧ ಮನಸ್ಸಿನ ಮುದ್ದು ಹೃದಯಗಳು ಅವರು ಪ್ರೀತಿಸುವವರನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಇಷ್ಟ ಪಡ್ತಾ ಇದ್ದರೆ ಅಂದ್ರೆ ಸಾಕು ಆ ಕ್ಷಣದಿಂದ ಅವರು ಪ್ರೀತಿಸುವವರ ಹೃದಯ ತನ್ನದೆಂದು ಭಾವಿಸಿ ಬಿಡ್ತಾರೆ ಹೃದಯ ನನಗಾಗೆ ಮೀಸಲು ಅಂದುಕೊಳ್ಳುತ್ತಾರೆ ಅವರ ಕಂಗಳಲಿ ಕಾಣುವ ನಮ್ಮ ಪ್ರತಿಬಿಂಬವನ್ನು ಯಾವಾಗಲು ಹಾಗೇ ಅವರಲ್ಲಿ ಬಚ್ಚಿಡೋದಕ್ಕೆ ಇಷ್ಟ ಪಡ್ತಾರೆ ಎಲ್ಲಾ ಸುಖ ದುಃಖ ದಲ್ಲಿ ಸಮವಾಗಿ ಹಚ್ಚಿಕೊಳ್ಳುತ್ತಾರೆ ನಮ್ಮನು ಪ್ರೀತಿಸುವವರ ಕಣ್ಣಲಿ ಒಂದು ಹನಿ ಕಣ್ಣೀರನ್ನು ಕೂಡಾ ನೆಲಕ್ಕೆ ಬೀಳದ ಹಾಗೆ ಜೋಪಾನ ಮಾಡಿಕೊಡು ಬರ್ತಾರೆ ಹೇಗೆ ಕಣ್ಣಿನ ರೆಪ್ಪೆ ಕಣ್ಣನ್ನು ಕಾಪಾಡಿಕೊಳ್ಳುತ್ತದೆ ಹಾಗೇ ನಾವು ಪ್ರೀತಿಸುವವರನ್ನು ಜೋಪಾನ ಮಾಡ್ತಿವಿ...,

ನಿನ್ನ  ಕಣ್ಣಿನಲಿ ಕಾಣುವ ನನ್ನ ಪ್ರತಿಬಿಂಬವನ್ನು ನಿನ್ನ ಹೃದಯದಲಿ ಕೂಡಿಡು ಬೇಡಲಾರೆ ಮತ್ತೇನು ಆ ಹೃದಯವನ್ನು ನನಗಾಗೆ ಮೀಸಡಿಡು
ಸಾಯೋ ಜೀವನ ಯಾರು ಬದುಕಿಸೋದಕ್ಕೆ ಆಗೋಲ್ಲ ಅಲ್ವಾ ಹಾಗೇ ಹುಟ್ಟೋ ಪ್ರೀತಿನ ಯಾರು ಸಾಯುಸುವುದಕ್ಕೆ ಆಗೋಲ್ಲ ಪ್ರೀತಿಸುವವರು ಸತ್ತರು ಅವರ ಪ್ರೀತಿಗೆ ಯಾವತ್ತೂ ಸಾವಿಲ್ಲ..., ಪ್ರೀತಿಗೆ ಜಾತಿ, ಭಾಷೆ, ಯಾವ್ದು ಮುಕ್ಯ ಅಲ್ಲ ಜಾತಿ ನೋಡಿ ಪ್ರೀತಿ ಮಾಡಿದ್ರೆ ಅದು ಪ್ರೀತಿ ಅಂಥ ಅನಿಸೋದೆ ಇಲ್ಲ AnD ಪ್ರೀತಿಗೆ ಯಾವ ಭಾಷೆನೂ ಬೇಕಾಗಿಲ್ಲ ನಮ್ಮನ್ನು ಮನಸಾರೆ ಪ್ರೀತಿಸುವ DeN ಅರ್ಥ ಮಾಡಿಕೊಳ್ಳುವ ತುಂಬಾ ಕಾಳಜಿವಹಿಸುವ ಪರಿಶುದ್ಧವಾದ ಮುಗ್ಧ ಹೃದಯ ಸಿಕ್ಕಿದ್ರೆ ಸಾಕು ಅನಿಸುತ್ತೆ ..., ಪ್ರೀತ್ಸೋ ಹೃದಯಗಳು ಯಾವತ್ತೂ ಪ್ರೀತಿನ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಸಿ...., 

ಪ್ರೀತಿಗೆ ಅದರದೇ ಆದ ದೊಡ್ಡ ಸ್ಥಾನನೆ ಇದೆ ಹಾಗೇ ಇರೋದಕ್ಕೆ ತಾಜ್ ಮಹಲ್ ಅನ್ನೋ ಪ್ರೇಮ ಸ್ಮರಕ ಇನ್ನೂ ನಮ್ಮ ಕಣ್ಣ ಮುಂದೆ ಜೀವಂತವಾಗಿ ನಿಂತಿರೋದು ರೋಮಿಯೋ ಜೂಲಿಯಟ್ ಸಲೀಮ್- ಅನಾರ್ಕಲಿ ಅನ್ನೋ ಅಲವಾರು ಪ್ರೇಮಿಗಳ ಹೆಸರುಗಳು ಇನ್ನೂ ಮರಿಯದೆ ಮನಸ್ಸಲ್ಲೆ ಮನೆ ಮಾಡಿರೋದು..., ಪ್ರೀತಿಸೋ ನಮ್ಮ ಹೃದಯ ಪುಟ್ಟದಿರಬಹುದು ಆದ್ರೆ ಅದರ ಒಳಗೆ ಬಚ್ಚಿಟ್ಟಿರುವ ನಮ್ಮವರ ಪ್ರೀತಿ ಇದೇ ಅಲ್ಲ ಅದು ಆಕಾಶಕ್ಕಿಂತ ಎತ್ತರವಾದದ್ದು ಹಾರೊ ಹಕ್ಕಿನ ಹಾರೊಕ್ಕೆ ಬಿಡ್ಬೇಕು ಯಾವತ್ತು ಬಂದಿಸಿ ಇಟ್ಕೋ ಬಾರದ್ದು ಹಾಗೇ ಪ್ರೀತಿನೂ ಒಂದು ಹೂ ಇದ್ದ ಹಾಗೆ ಬಿಗಿಯಾಗಿ ಇಡಿದಷ್ಟು ಬಾಡಿ ಹೋಗುತ್ತೆ...,

ನಮ್ಮ ಹೃದಯ ಪುಟ್ಟದಿರಬಹುದು ಆದ್ರೆ ಅದರ ಒಳಗೆ ಬಚ್ಚಿಟ್ಟಿ ನಮ್ಮವರ ಪ್ರೀತಿ ಅಕಾಶಕ್ಕಿಂತ ಎತ್ತರವಾದದ್ದು
ಪ್ರೀತಿ ಆದ್ಮೇಲೆ ಜಗಳ ಕೋಪ ಮುನಿಸು ಇಲ್ದೇ ಇರುತ್ತ ಅದೆಲ್ಲಾ ಇದ್ರೆನೆ ಚೆಂದ ಆದ್ರೆ ಮಿತಿ ಮೀರಿ ಆಡಬಾರದು ಏನೇ ಜಗಳ ಕೋಪ ಮುನಿಸು ಇದ್ರೂ ಕ್ಷಣ ಮಾತ್ರಕೆ ಎಲ್ಲವನ್ನೂ ದೂರ ಮಾಡಿದರೇನೆ ಪ್ರೀತಿಗೂ ಒಂದು ಬೆಲೆ ಸಿಕ್ಕಿದಂತೆ ಆಗುತ್ತೆ ಅರಿಯದೆ ಬರುವ ಪ್ರೀತಿಯಲ್ಲಿ ನೋವು ಹೆಚ್ಚು ಎಂದು ಗೊತ್ತಿದ್ದರೂ ಎಲ್ಲವನ್ನೂ ಸಹಿಸಿಕೊಳ್ಳುಬೇಕು ನಮ್ಮ ಪ್ರೀತಿಗಾಗಿ ನೋವೇ ಪ್ರೀತಿ ಅಂತಾ ಅಲ್ಲಾ ನಾವು ಪ್ರೀತಿಸುವ ನಮ್ಮವರು ನಮ್ಮ ಜೊತೆ ಜೊತೆಯಲಿ ಸದಾ ಕಾಲ ಇದ್ರೆ ಸಾಕು ಆ ನೋವಲ್ಲು ಸುಖವ ಕಾಣ ಬಹುದು...,

ಎಲ್ಲಾರೂ ಪ್ರೀತಿ ಮಾಡ್ತಾರೆ ಆದ್ರೆ ನಿಜವಾದ ಪ್ರೀತಿ ಸಿಗೋದು ತುಂಬಾ ಕಷ್ಟ ಇವಾಗಿನ ಕಾಲದಲ್ಲಿ ಕೇವಲ ಟೈಮ್ ಪಾಸ್ ಆಗಿ ಮಾತ್ರ ಉಳಿದುಬಿಟ್ಟಿದೆ ಪ್ರೀತಿನ ಪ್ರೀತಿಯಿಂದ ಪ್ರೀತಿಸೋರು ಸಿಗೋದೆ ಕಷ್ಟ ಆಗ್ಬಿಟ್ಟಿದೆ ಪ್ರೀತಿ ಆದ ಹೊಸದರಲ್ಲಿ ಚಿನ್ನ, ರನ್ನ, ಮುದ್ದು, ಬಂಗಾರ, ಸ್ವೀಟ್ ಹಾರ್ಟ್, ಡಾರ್ಲಿಂಗ್ ಎಲ್ಲಾ ನಿನ್ ಇಲ್ದೆ ನಾನ್ ಇಲ್ಲ ಮನಸೆಲ್ಲಾ ನೀನೆ AnD ನಿನ್ನೆ ನನ್ನ ಉಸಿರು ಎಲ್ಲಾ BuT ಬರ್ತಾ ಬರ್ತಾ ಅದೆಲ್ಲ ಎಲ್ಲಿ ಮಾಯಾ ಆಗುತ್ತೋ ಆ ದೇವರಿಗೆ ಗೊತ್ತು ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಯಾರಿಗೂ ಯಾವತ್ತು ಮೋಸ ಮಾಡ್ಬೇಡಿ So Lv Is Nt Fr TyM PaS ItS A LyF...,


ಪ್ರೀತ್ಸೋ ಪ್ರೀತಿನ
ಪ್ರೀತಿಯಿಂದ ಪ್ರೀತಿಗಾಗಿಯೆ
ಪ್ರೀತಿಗೋಸ್ಕರ ಪ್ರೀತಿಸಿ...,

ಪ್ರೀತಿಸಿದ ಪ್ರೀತಿಯನ್ನು
ಪ್ರೀತಿಯಿಂದ ಪ್ರೀತಿಸಿದಲ್ಲಿ
ಪ್ರೀತಿ ಪ್ರೀತಿಯನೆ
ಪ್ರೀತಿಗೋಸ್ಕರ ಪ್ರೀತಿಸುತ್ತದೆ...,

ಪ್ರೀತಿಸುವವರ ಪ್ರೀತಿನ
ಪ್ರೀತಿಯಿಂದ ಪ್ರೀತ್ಸಿ
ಪ್ರೀತಿಯನ್ನು ಪ್ರೀತಿಯಿಂದ
ಪ್ರೀತಿಮಾಡಿ...,
ಪ್ರೀತಿನ ಪ್ರೀತಿಯಿಂದನೆ
ಪ್ರೀತಿಸುತ್ತಾನೆ ಪ್ರೀತಿಸಿದರೆ
ಪ್ರೀತಿ ಪ್ರೀತಿಯನೆ
ಪ್ರೀತಿಮಾಡುತ್ತದೆ...,

ಪ್ರೀತಿನ ಪ್ರೀತಿಯಿಂದನೆ
ಪ್ರೀತಿಮಾಡಿ ಪ್ರೀತಿನ
ಪ್ರೀತಿಸುತ್ತಾನೆ ಪ್ರೀತಿಸಿ...,

ಮನಸ್ಸಿನ ಪುಟಗಳ ನಡುವೆ ನೆನಪಿನ ನವಿಲುಗರಿ..! ಎಂದೆಂದಿಗೂ ನಿಮ್ಮ ಸ್ನೇಹದ ಸೇತುವೆ.., ಯುವರ್ ಸ್ವೀಟ್ ಹಾರ್ಟ್ ಗೆಳತಿ... ಸಿಂಪಲ್ ಹುಡ್ಗಿ ನೇತ್ರಾ...!!!

Sunday 9 December 2012

ಇಂದು ಕೂಡ ಕಾಯುತ್ತಿರುವೇ...,
ಕಿಟಕಿ ಆಚೆ ಮುಖ ಮಾಡಿ

ನೀ ಬರುವ ದಾರಿಯ...
ಬಂದೆ ಬರುವೆ ಎಂದು

ಬಂದು ಅಳುವ ನನ್ನ ತಬ್ಬಲಿ...,

ಕಂಗಳನ್ನು ಒರೆಸುವೆ
ಎಂಬ ಹುಸಿ ನಂಬಿಕೆಯೊಂದಿಗೆ...
ಏನೂ ಅರಿಯದ ಮನಸ್ಸಿಗೆ...,
ಸಹಿಸಲಾಗದಷ್ಟು ನೋವನ್ನು ಕೊಟ್ಟು...!!!
ನಗು ಏಂದರೆ???

ನಗುವುದೇ ಮನಸ್ಸು...,
ನಕ್ಕರೂ ನಗಬಹುದು ನಿನಗೋಸ್ಸರ...!!!
ಆದರೆ??
ಈ ಮನಸ್ಸಿನೊಳಗೆ ಕಾಡುವ ನೋವನ್ನು...,
ಅರಿಯಬಲ್ಲೆಯಾ ನೀನು...!!!
ಆ ನಿಷ್ಕಲ್ಮಶ ನಗುವಲ್ಲಿ...
,
♥ನಿನ್ನ ಕಣ್ಣಿನಲ್ಲಿ ಕಾಣುವ ನನ್ನ
ಪ್ರತಿಬಿಂಬವ... ♥

♥ ನಿನ್ನ ಹೃದಯದಲಿ ಕೂಡಿಡು?
ಬೇಡಲಾರೆ ಮತ್ತೇನು ನಿನ್ನ ♥

♥ ♥ ♥ ಆ ಹೃದಯವನ್ನು ♥ ♥ ♥
ನನಗಾಗೆ ಮೀಸಲಿಡು...
 
 
ಪ್ರೀತಿಯಿಂದ
ಸಿಂಪಲ್ ಹುಡ್ಗಿ ನೇತ್ರ

ಹುಚ್ಚು ಮನವೇ

ಹುಚ್ಚು ಮನವೇ ಮರುಗದಿರು...,
ಮರೆತು ಬಿಡು ಕಾಡುವ ಹಳೆಯ
ನೆನಪುಗಳನ್ನು...!!!

ಮಾತಾಡು ಮನವೇ...,
ನಿನಗೇಕೆ ಇಂತ ಮೌನ

ನಿನ್ನಗೆ ಇದು ಒಪ್ಪದು...!!!
ಕೊರಗೋದು ಬಿಟ್ಟು ಬದುಕುವುದಾ ಕಲಿ...,
ಹುಟ್ಟಿ ಹಾಕು ಎಂದು ಮರೆಯಲಾಗದಂತ
ಸವಿ ಸುಂದರ ನೆನಪೊಂದನ್ನು...!!!

ಬದುಕಲಿ ಕಲಿಯೋದು ಇನ್ನೂ ಇದೆ...,
ಇದ್ದು ಎದುರಿಸು
ಕೊಲ್ಲುವ ನೆನಪುಗಳನ್ನು...!!!

ಪ್ರೀತಿಯಿಂದ
ಸಿಂಪಲ್ ಹುಡ್ಗಿ ನೇತ್ರ

Monday 27 August 2012


ದೂರವಿರುವ ನೆನಪಿನಲ್ಲೇ...,
ಸನಿಹವಿರುವ ಮನಸು...!!!
ಸನಿಹವಾದ ಮನಸಿನಿಂದ...,
ದೂರಾಗದ ನೆನಪು...!!!
ಸಹಜವಾದರೂ ಮನವೇ...,
ಸರಿಸು ನೆನಪನ್ನು...!!!
ನಡೆಸು ಬದುಕನ್ನು...,
ಅರಿಯದೆ ಬರುವ ಪ್ರೀತಿಯಲ್ಲಿ...,
ನೋವು ಹೆಚ್ಚು ಎಂದು...!!!
ಗೊತ್ತಿದ್ದರೂ ಸಹಿಸಿಕೊಳ್ಳುತ್ತೇವೆ...,
ಏಲ್ಲವನ್ನು ಪ್ರೀತಿಗಾಗಿ...!!!
ನೋವೇ ಪ್ರೀತಿ ಅಂತಾ ಅಲ್ಲಾ...,
ಪ್ರೀತಿಸುತ್ತಿರುವವರು???
ನಮ್ಮ ಜೊತೆಯಲ್ಲಿ ಇದ್ದರೆ ಆ ನೋವಲ್ಲೂ...!!!
ಸುಖವಾ ಕಾಣಬಹುದೆಂದು...,

ಪ್ರೀತಿಯಿಂದ
ಸಿಂಪಲ್ ಹುಡ್ಗಿ ನೇತ್ರ


Friday 22 June 2012

ಮರಿ ಹಾಕುತ್ತದೆಂದು ನವಿಲುಗರಿಯನ್ನು
ಪುಸ್ತಕದೋಳಗೆ ಬಚ್ಚಿಡುವಂತೆ..!!
ನಿನ್ನಾ ನೆನಪನ್ನು ಈ ಎದೆಯೋಳಗೆ
ಬಚ್ಚಿಟ್ಟಿದ್ದೇನೆ ನಾನು..!!!


ಈ ಮಳೆಗೆ ಏನೋ ಸೆಳೆತ ಇದೆ..!!!
ಅದೇನೆಂದು ತಿಳಿಯಲು ಹೋದರೆ..!!
ಒಮ್ಮೇಲೆ ನೆನಪಾಗುತ್ತವೆ ಸಾವಿರಾರು
ನೆನಪುಗಳು..!!
ಆ ನೆನಪುಗಳಲೆಲ್ಲಾ ನಿನ್ನಾ ನೆನಪೇ ಪ್ರಥಮ..!!
ನಿನ್ನದೇ ಅಂತಿಮ..!!


ಪ್ರೀತಿಯಿಂದ
ಸಿಂಪಲ್ ಹುಡ್ಗಿ ನೇತ್ರ



Saturday 26 May 2012

ಒಂದು ಸಾವಿನ ಸುತ್ತಾ..!!




ಆ ದಿನ ಸಂಜೆ ಕಾರ್ಮುಗಿಲಂತ ದಟ್ಟ ಮೋಡಗಳು ಆವರಿಸಿ ಸುತ್ತಲೂ ಮಂಕು ಕವಿದ ವಾತಾವರಣ ಜೊತೆಗೆ ಅವನ ಮನಸ್ಸಿನಲ್ಲಿಯೂ ಕೂಡ... ಅದನ್ನೆ ನೋಡುತ್ತಾ ಕಿಟಕಿಯತ್ತ ಮುಖ ಮಾಡಿ ಕುಳಿತ್ತಿದ್ದ ಆ ವ್ಯಕ್ತಿಗೆ ತಕ್ಷಣ ಏನ್ ಅನ್ನಿಸಿತೋ ಏನೋ ಅಲ್ಲೇ ಒಂದು "ಲೆಟರ್" ಅನ್ನು ಬರೆಯಲು ಶುರು ಮಾಡಿದ....


ಆ ಕಾಗದದ ಸುತ್ತಾ ತಯಾರಾಗಿದ್ದೆ ಈ ಒಂದು ಸಾವಿನ ಸುತ್ತಾ ಅನ್ನೋ ಲೇಖನ..!!!!


ಆ ವ್ಯಕ್ತಿ ಕಾಗದದ ಪೂರ್ತಿ ತನ್ನ ಮನಸ್ಸಿನ ಭಾವನೆಗಳನ್ನ ಹೇಳಿ ಕೊಂಡಿದ್ದಾನೆ...
ನೋವುಗಳನ್ನ ತೋಡಿಕೊಂಡಿದ್ದಾನೆ...
ಅವನು ಬರೆದ ಆ ಕಾಗದದಲ್ಲಿ ಹೃದಯ ಕಲಕುವಂತ ಮಾತುಗಳು ತುಂಬಿವೆ..!!
ಸಾವಲ್ಲೂ ತನ್ನ ಪ್ರೀತಿಯನ್ನು ಎಲ್ಲರಿಗೂ ತಿಳಿಸಿದ್ದಾನೆ..!!
ಹಾಗಾದರೆ ಆ ಪತ್ರದಲ್ಲಿ ಇರೋದಾದರೂ ಏನೂ ಅಂತಾ ತಿಳಿಯೋಣ ಬನ್ನಿ....!!




ಹೇ ಮಂಕು ಕವಿದ ಸಂಜೆಯೇ.., ನಿದ್ದೆ ಬರದ ಕ್ಷಣಗಳೇ, ಸುತ್ತ ಮುತ್ತಲು ಕಾಡುತ್ತಿವೆ ಬರೀ ನನ್ನದೆ ಪ್ರತಿ ಬಿಂಬಗಳು.. ಇನ್ನೆಂದು ನನ್ನನ್ನು ಶ್ವೇತ ವರ್ಣದ ಹೂಗಳು ಹೀಯಾಳಿಸೋಲ್ಲ..!! ಯಾಕೆಂದರೆ ನಾನೂ ದುಃಖವನ್ನು ಮಿರಿದ ಜಾಗಕ್ಕೆ ಹೋಗುತ್ತಿದ್ದೀನಿ..!! ನನ್ನನ್ನು ಬದುಕಿಸುವ ಬಗ್ಗೆ ದೇವತೆಗಳು ಯಾವತ್ತು ಯೋಚಿಸೋಲ್ಲ.., ಯಾಕೆಂದರೆ ನಾನು ನಿನ್ನನ್ನು ಸೇರುತ್ತೇನೆಂದರೆ ದೇವತೆಗಳಿಗೆ ಕೋಪ ಬರುತ್ತೆ..!!

ಈ ಮಂಕು ಸಂಜೆಯಲ್ಲಿ ನನ್ನ ಜೊತೆಗೆ ಯಾರೂ ಇಲ್ಲ.., ಕೇವಲ ನನ್ನ ಪ್ರತಿಬಿಂಬಗಳನ್ನು ಬಿಟ್ಟು..!!
ಅವುಗಳ ಜೊತೆಯಲ್ಲೇ ನಾನು ಬದುಕುತ್ತಿದ್ದೇನೆ... ಅದಕ್ಕೆ ಈ ಬದುಕು ಸಾಕು.., ಎಂದು ಇದಕ್ಕೊಂದು ಅಂತ್ಯ ಬರೆಯಲು ನಾನು ಮತ್ತು ನನ್ನ ಹೃದಯ ನಿರ್ಧರಿಸಿ ಆಗಿದೆ...!!!

ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲಿ ಕ್ಯಾಂಡಲ್ ಗಳು ಬೆಳಗುತ್ತವೆ..!! ಪ್ರಾರ್ಥನೆಗಳ ಧ್ವನಿ ಕೇಳುತ್ತದೆ..!! ಅದೂ ನನಗೆ ಗೊತ್ತಿದೆ... ಆದರೆ ಯಾರೂ ನನಗಾಗಿ ಕಣ್ಣೀರು ಹಾಕುವುದು ಬೇಡ.., ಯಾರು ಬೇಸರಪಟ್ಟುಕೊಳ್ಳುವ ಅಗತ್ಯ ಇಲ್ಲ..!! ಯಾಕೆಂದರೆ ನಾನು ಖುಷಿಯಾಗೆ ಹೋಗುತ್ತಿದ್ದೇನೆ..!! ಅದು ಎಲ್ಲರಿಗೂ ಗೊತ್ತಿರಲಿ...!!

ಈ ಸಾವು ಅನ್ನೋದೆ ಒಂದು ಕನಸು.., ಆದರೆ ಆ ಸಾವಲ್ಲೂ ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತೀನಿ..!! ನನ್ನ ಕೊನೆಯ ಉಸಿರಲ್ಲೂ ನಾನು ನಿನ್ನನ್ನು ಹರಸುತ್ತೇನೆ..!! 
ಇನ್ನು ನಾನು ಕನಸು ಕಾಣುವುದನ್ನು ಬಿಟ್ಟು ಬಿಡ್ತಾ ಇದ್ದೀನಿ -!! ಕಾರಣ ನನ್ನ ಕನಸೇ ಈ ಸಾವು..!!

ಓ ಪ್ರಿಯೆ..., ನಾನು ಎದ್ದಾಗ ನನ್ನ ಹೃದಯದಲ್ಲಿ ನೀನು ಇನ್ನೂ ಮಲಗೆಕೊಂಡೆ ಇದ್ದೆ..!! ನನ್ನ ಕನಸು ನಿನಗೆ ತೊಂದರೆ ಕೊಟ್ಟಿಲ್ಲ  ಅನ್ನೋ ವಿಶ್ವಾಸ ನನಗೆ ಇದೆ..!! ನನ್ನ ಹೃದಯ ಹೇಳುತ್ತಿದ್ದೆ ನಾನು ನಿನ್ನನ್ನು ಎಷ್ಟು ಇಷ್ಟ ಪಡ್ತೀನಿ ಅಂತಾ..!! ಆದರೆ ನಿನಗದು ಎಂದು ಅರ್ಥವಾಗಲೇ ಇಲ್ಲಾ..!! ಆದರೂ ಈ ಸಾವಲ್ಲೂ ನನ್ನ ಪ್ರೀತಿ ಅಮರ...!!


ಹೇ ಮಂಕು ಕವಿದ ಸಂಜೆಯೇ ನೀನು ಕೂಡ ಅರ್ಧ ಸತ್ಯ ಈ ಸಾವಿಗೆ...!!

Friday 25 May 2012

ನೆನಪುಗಳು

ನಿನ್ನೆಲ್ಲಾ ಪ್ರೀತಿಯನ್ನು..,
ನಿನ್ನೊಂದಿಗೆ
ಈ ಮನದಿಂದ
ಸುಟ್ಟು ಹಾಕಿದ
ಮೇಲೆ...
ನೀರಿಗೆ ಬಿಡಲು
ಮರೆತ
ಬೂದಿ
ನಿನ್ನ ನೆನಪು..!!



ಪ್ರೀತಿಯಿಂದ
ಸಿಂಪಲ್ ಹುಡ್ಗಿ ನೇತ್ರಾ

Thursday 24 May 2012

ಬಿಟ್ಟು ಹೋದ ಗೆಳೆಯನಿಗೊಂದು ಮಾತು..

ನೆನಪಿದೆಯಾ ಗೆಳೆಯ....
ಅಂದು ಸುರಿಯುವ ಇದೇ ಮಳೆಯಲ್ಲಿ.,
ನಾವಿಬ್ಬರೂ ಮಿಂದ ಆ ಮಧುರ ಕ್ಷಣಗಳು...
ಮಳೆಯಾ ಜೊತೆ ಆಟವಾಡಿದ ಆ ದಿನಗಳು...
ನೀರಲ್ಲಿ ಕಾಗದದ ದೋಣಿ ಮಾಡಿ
ಬಿಟ್ಟ ಸವಿ ನೆನಪುಗಳು...
ಹನಿಗಳ ಚಟಪಟ ಸದ್ದಿನ ನಡುವೆಯೇ
ಕೂಗಿ ಹೇಳಿದ
ಸಾವಿರ ಮಾತುಗಳು..!!
ಮರೆತಿರಬಹುದು ನೀನು
ಪ್ರತಿಯೊಂದನ್ನು..!!
ಆದರೆ..
ನನ್ನೋಳಗೆ ಬಚ್ಚಿಟ್ಟಿದ್ದೇನೆ ಎಲ್ಲವನ್ನು..,
ಸ್ವಾತಿ ಮುತ್ತನ್ನು
ಕಪ್ಪೆಚಿಪ್ಪು ತನ್ನೆದೆಯೋಳಗೆ
ಬಚ್ಚಿಡುವಂತೆ..!!

ಇಂದು ಕೂಡ ಮಳೆ ಬರುತ್ತಿದೆ..!
ಅದರ ಜೊತೆ ಆಟವಾಡುವ ಆಸೆಯಾಗಿದೆ..!
ಮಳೆಯಲ್ಲಿ ಮೀಯುವಾ ಮನಸ್ಸಾಗಿದೆ..!
ಆದರೆ..,
ಜೊತೆಯಲ್ಲಿ ನೀ ಇಲ್ಲಾ..!!
ಇರುವುದು ಕೇವಲ ನಿನ್ನಾ ನೆನಪಿನ ಕಣ್ಣೀರ ಹನಿಗಳು..!!
ಅವುಗಳ ಜೊತೆಯೇ ನೆನಯುತ್ತಿದ್ದೇನೆ..!!
ಜೊತೆಗೆ ಬೇಯುತ್ತಿದ್ದೇನೆ..!! :( :(




♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥

ಮೌನ ಮಾತಾದಾಗ


ನಿನ್ನಾ ಪ್ರೀತಿಯದು ಇನ್ನೂ
ಜೀವಂತವಾಗಿರುವುದು.,
ಕೇವಲ
ನನ್ನಾ ಕವನದ ಸಾಲುಗಳಲ್ಲಿ..!!
ಜೊತೆಗೊಂದಷ್ಟು
ಈ ಮನದ
ಮೂಲೆಯಲ್ಲಿನ
ಸವಿ ನೆನಪುಗಳಲ್ಲಿ..!
!




ನಿನ್ನ ನೆನೆಯದ
ದಿನಗಳೆಲ್ಲಿವೆ..
ನಿನ್ನ ಪ್ರೀತಿಸದ
ಕ್ಷಣಗಳೆಲ್ಲಿವೆ...
ಏನಿದ್ದರೇನು ಮನವೇ...
ಇಂದು ನೀ
ನನ್ನೋಳಿಲ್ಲ..!!
ಇದ್ದರೂ ಈ
ಬಾಳಲಿಲ್ಲ..!!





ನೀನಿಲ್ಲದ ಬದುಕಿದು..,
ಅಂಬಿಗನಿಲ್ಲದೆ
ಸಾಗುತ್ತಿರುವ ದೋಣಿಯಂತೆ..!!
ಬಾಳಿಗೆ ಆಸರೆಯಿಲ್ಲಾ..!!
ಬದುಕುವ ಬಗೆ
ಗೋತ್ತಿಲ್ಲ..!!






ಕಣ್ಣಂಚಿನ ಪ್ರತಿಯೊಂದು
ಹನಿಗೂ..,
ಒಂದೊಂದು
ಕಥೆ ಇದೆ..!!
ಯಾರಿಗೂ ಹೇಳಲಾರದ
ವ್ಯಥೆ
ಅದರಲ್ಲಿ ಅಡಗಿದೆ..!!





ಪ್ರೀತಿಯಿಂದ

ನೇತ್ರಾ



Wednesday 9 May 2012

ಇದು ಕಥೆ ಅಲ್ಲ ಕಣ್ರೀ ನಮ್ಮ ವ್ಯಥೆ

ಭಾವನೆಗಳು ಇರೋತನಕ ಆಸೆ..
ಭಾವನೆಗಳೇ ಸತ್ತರೆ..??

ಆಸೆಗಳು ಇರೋ ತನಕ ಕನಸು..

ಕನಸುಗಳೇ ಸತ್ತರೆ..??

ಜೀವಾ ಇರೋವರೆಗೂ ಜೀವನ..

ಈ ಜೀವನೇ ಹೊರಟುಹೋದ್ರೆ..??




ಬದುಕು ಅಂದ್ರೆ ಹೀಗೆ ಉತ್ತರಿಸಲಾಗದ ಅದೆಷ್ಟೋ ಸಾವಿರ ಪ್ರಶ್ನೆಗಳಾ ಸಮೂಹ..!
ಯಾವುದು
ಶಾಶ್ವತ ಅಲ್ಲಾ ಈ ಜೀವನದಲ್ಲಿ..,
ಅಳುವಾಗ ನಮ್ಮ ಕಣ್ಣೀರಾ ಹನಿಯೂ ಕೂಡ ನಮ್ಮನೂ ಬಿಟ್ಟು ಹೊರಟು ಹೋಗುತ್ತೆ ಅದೇ ಜೀವನಾ..!

ಇಂದೊಂದು ಸತ್ಯನಾ ಅರಿತುಕೊಂಡಾಗ ಮಾತ್ರ ಈ ಜೀವನಾ ಕೂಡ ಸುಂದರವಾಗಿ ಕಾಣುತ್ತೆ..!:)




♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥

ಮೂಕ ಮನಸಿನ ಮೌನ ರಾಗ




ಹೊರ ಹೊಕ್ಕ
ಕಣ್ಣೀರಿನ
ಮನೋಭಾವ ಇದು
ನಿಂತ ನಿಲುವಲ್ಲೆ ಕುಸಿದು ಬೀಳುವಂತಾ
ವ್ಯಥೆ ಇದು..!!ಕಣ್ಣಾ ನೀರ ಒಂದೊಂದು ಹನಿಯೂ
ನೆತ್ತರಂತೆ ಹರಿದ ಅನುಭವ ಇದು
ಪ್ರೀತಿಸಿದ ಪ್ರೀತಿ ಮಾಯ ಆದರೂ.,
ಅದರ ಸವಿ ನೆನಪಲ್ಲೆ ಬದುಕೋ
ಮನಸು ಇದು..!!:-(



ಮಳೆಯೊಂದಿಗಿನ ಏಕಾಂತದ
ಸಂಜೆಯಲಿ..,
ಬೆಂಬಿಡದೆ ಕಾಡುವ ನೆನಪುಗಳ

ಜೊತೆ ಪಯಣ..!! 
ಮುಖವಾ ತೋಯಿಸಿದ ಮಳೆ ನೀರ
ನಡುವೆಯೇ

ಕಣ್ಣೀರಿನ ಆಗಮನ..!!
ಮಳೆಹನಿ ನೆಲವನ್ನು ಅಪ್ಪಿ
ಚಿಮ್ಮುತ್ತಿದಂತೆಯೇ..,

ಮನದಲ್ಲಿನ ನೆನಪುಗಳೆಲ್ಲಾ
ಒಮ್ಮೇಲೆ
ಚಟಪಟ ಸದ್ದು ಮಾಡಿ

ಮತ್ತೆ ಮೌನ..!!



♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥


Monday 7 May 2012

ನನ್ನ ಉಸಿರಲಿ ನಿನ್ನ ನೆನಪಿದೆ




ಹೃದಯವಿದು ಮಿಡಿಯುತ್ತಿರುವುದು
ನಿನ್ನದೊಂದೆ
ಹೆಸರಿನಲಿ...
ನೀ ಕೂಡಿಟ್ಟ ಕನಸುಗಳ
ಒಲವಿನಲಿ...
ಅಳಿಸಲಾರದ ಭಾವಗಳ
ಬಂಧನದಲಿ...
ಮರೆಯಲಾಗದ ಪ್ರೀತಿಯಾ
ಸವಿ ನೆನಪಿನಲಿ...



♥ ಪ್ರೀತಿಯಿಂದ ♥
 ♥ ಸಿಂಪಲ್ ಗರ್ಲ್ ನೇತ್ರಾ ♥

ಹುಚ್ಹು ಪ್ರೀತಿ




ದೂರವಾದೆಯಾ ನನ್ನಾ ಬಿಟ್ಟು..!!
ಎಷ್ಟಂತಾ ಹೇಳಲಿ ನನ್ನಾ
ಪ್ರೀತಿಯಾ ಕಣ್ಣೀರಿಟ್ಟು..!!
ಏನಂತಾ ನುಡಿಯಲಿ ನನ್ನಾ
ಪ್ರೀತಿಯಾ ಬಚ್ಚಿಟ್ಟು..!!
ಪ್ರಾಣವೇ ಇಲ್ಲದಿರುವಾಗ ಬದುಕಲು
ಆಸೆಯಿಲ್ಲಾ ಕಿಂಚಿತ್ತು..!!
ಆದರೂ ಬದುಕಿರುವೆನು ನಿನ್ನಾ
ನೆನಪನ್ನು ಕೂಡಿಟ್ಟು..!!

♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥

ಒಮ್ಮೆ ಬಾರೋ





ನೀನಿದ್ದ ನೆನ್ನೆಗಳಲ್ಲಿ ಬದುಕಿರುವ
ನಾನು..,
ನೀನಿರದ ನಾಳೆಗಳಲ್ಲಿ
ಬದುಕಿರಲಾರೆ..!!
ಎಲ್ಲವನ್ನು ಮುಖಕ್ಕಿಡಿದು ತೋರುವ
ಕನ್ನಡಿ
ನಾನು ಆಗಲಾರೆ..!!
ತಿಳಿಯೋ ಮನಸ್ಸಿದ್ದರೆ ನೀನೆ
ಅರಿತು ಬಾ..!!

♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥

Sunday 29 April 2012

ನಿನಗಾಗಿ





ಈ ಹೃದಯದ ಪ್ರತಿ ಮಿಡಿತವೂ
ನೀನೆ..!!
ಮಿಡಿಯುವ ಕ್ಷಣ ಕ್ಷಣವೂ ನೆನಪಿಸುವುದು
ನಿನ್ನನ್ನೆ..!!
ಮಿಡಿವಾ ಹೃದಯ ನಿಲ್ಲಬಹುದು
ಒಂದು ದಿನ..!!
ನಿಂತ ಮೇಲೂ ಮರೆಯದೂ ನಿನಗಾಗಿ
ಮಿಡಿದುದ್ದನ್ನ..!!

♥ ಪ್ರೀತಿಯಿಂದ ♥
♥ ಸಿಂಪಲ್ ಗರ್ಲ್ ನೇತ್ರಾ ♥

Saturday 28 April 2012

ಮತ್ತೆ ಮತ್ತೆ ನಿನ್ನಾ ನೆನಪೇ







ನಿನ್ನಾ ನೆನಪಲ್ಲೆ ಬದುಕಿರುವ
ಜೀವ ಇದು...


ಬಯಸುತ್ತಿರುವುದು
ನಿನ್ನಾ ಪ್ರೀತಿ..!!


ಬರಿದಾದ ಈ ಹೃದಯದಲ್ಲಿ
ತುಂಬಿರುವುದೊಂದೆ...


ನಿನ್ನಾ
ನೆನಪಿನ ನೋವು..!!


ನೀನಿಲ್ಲದಿರೋ ಈ ಬದುಕು
ಬರಡು ಮರಳುಗಾಡಿನಲ್ಲಿ ಗುಟುಕು
ನೀರಿಗಾಗಿ


ಅಲೆಯುತ್ತಿರುವ
ಮನದಂತೆ..!!


ಈ ಮನವ ನೋಯಿಸಿ ಇರಬಲ್ಲೆಯಾ
ನೀನು..!!
ಮರಳಿ ಬರಲಾರೆಯಾ ನೀನು..!!




♥ ಪ್ರೀತಿಯಿಂದ ♥
♥ ಸಿಂಪಲ್ ಹುಡ್ಗಿ ನೇತ್ರಾ ♥ 

ಧಮನಿ ಧಮನಿಯಲೂ ನೀನೆ







ಈ ಹೃದಯ ಮಿಡಿಯುವುದೇ ನಿನ್ನಾ
ಉಸಿರಿನ ಜೊತೆ..!!


ಧಮನಿ ಧಮನಿಯಲೂ ತುಂಬಿದೆ
ನಿನ್ನಾ
ಪ್ರೀತಿಯಾ ಬಯಕೆ..!!


ಏಕೆಯಾದರೂ ನೀ ಇಷ್ಟು ಸನಿಹವಾದೆ
ನನಗೆ..!!


ಪ್ರಾಣವೇ ನೀನು ಇದು ತಿಳಿದಿರಲಿ
ನಿನಗೆ..!!


ಉಸಿರಾದ ಪ್ರೀತಿಗೆ ಈ ಜೀವವೇ
ಮುಡುಪಾಗಿದೆ
ಕೊನೆಗೆ..!!




♥ ಪ್ರೀತಿಯಿಂದ ♥
♥ ಸಿಂಪಲ್ ಹುಡ್ಗಿ ನೇತ್ರಾ ♥